Download Our App

Follow us

Home » ಕರ್ನಾಟಕ » ಯುವಕ, ಯುವತಿಯರಿಗೆ ಆಸರೆಯಾದ ವಿನೋದ ಅಸೂಟಿ : ಶಾಂಭವಿ ವಿನೋದ ಅಸೂಟಿ ಟ್ರಸ್ಟ್ ನಿಂದ ಉಚಿತ ಆನ್ಲೈನ್ ತರಬೇತಿ

ಯುವಕ, ಯುವತಿಯರಿಗೆ ಆಸರೆಯಾದ ವಿನೋದ ಅಸೂಟಿ : ಶಾಂಭವಿ ವಿನೋದ ಅಸೂಟಿ ಟ್ರಸ್ಟ್ ನಿಂದ ಉಚಿತ ಆನ್ಲೈನ್ ತರಬೇತಿ

ನವಲಗುಂದ ವಿಧಾನಸಭಾ ಕ್ಷೇತ್ರದ ಯುವಕ ಮತ್ತು ಯುವತಿಯರಿಗೆ ಉದ್ಯೋಗ ಮತ್ತು ಅವರ ಭವಿಷ್ಯದ ಬಗ್ಗೆ ಕಾಳಜಿ ಹೊಂದಿರುವ ಯುವ ಮುಖಂಡ ಹಾಗೂ ಕಾಂಗ್ರೇಸ್ ನಾಯಕ ವಿನೋದ ಅಸೂಟಿ ತಮ್ಮ ಟ್ರಸ್ಟ್ ವತಿಯಿಂದ ಮತ್ತೊಂದು ಕಾರ್ಯಕ್ಕೆ ಸಜ್ಜಾಗಿದ್ದಾರೆ. 

ವಿನೋದ ಅಸೂಟಿ, ತಮ್ಮ ಸ್ವಂತ ದುಡ್ಡಿನಿಂದ ನವಲಗುಂದ ವಿಧಾನಸಭಾ ಕ್ಷೇತ್ರದ ಯುವಕ ಯುವತಿಯರಿಗೆ ತರಬೇತಿ ನೀಡುವ ಮೂಲಕ ಮಾದರಿಯಾಗಿದ್ದಾರೆ.

ರಾಜಕಾರಣಿಗಳು, ಕೇವಲ ಚುನಾವಣೆ ಬಂದಾಗ ಮಾತ್ರ ಮನೆ ಮನೆಗೆ ಹೋಗಿ ಮತ ಕೇಳುವ ಬದಲು ಅವರ ಮನೆತನದ ಭವಿಷ್ಯ ನಿರ್ಮಾಣ ಮಾಡಬಲ್ಲ ಮಕ್ಕಳ ಬಗ್ಗೆ ಕಾಳಜಿ ವಹಿಸಿದ್ದಾರೆ.

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ತುಂಬಲಿರುವ ಹುದ್ದೆಗಳಿಗೆ, ವಿದ್ಯಾರ್ಥಿಗಳನ್ನು ಸಜ್ಜು ಮಾಡಲು ಪರೀಕ್ಷಾ ಪೂರ್ವ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. 

ಕೇಂದ್ರ ಸರ್ಕಾರದ ಪ್ರಮುಖ ಹುದ್ದೆಗಳಾದ ರೈಲ್ವೇ, ಬ್ಯಾಂಕಿಂಗ್, ಡಿ ಗ್ರೂಪ್ ಹುದ್ದೆ ಸೇರಿದಂತೆ ಈ ವರ್ಷ ಸಾವಿರಾರು ಹುದ್ದೆಗಳ ಭರ್ತಿ ನಡೆಯಲಿದೆ. 

ನವಲಗುಂದ ತಾಲೂಕಿನ ವ್ಯಾಪ್ತಿಯಲ್ಲಿ   ಉದ್ಯೋಗದ ನಿರೀಕ್ಷೆಯಲ್ಲಿರುವ ಯುವಕ, ಯುವತಿಯರಿಗೆ   ಶಾಂಭವಿ ವಿನೋದ ಅಸೂಟಿ ಟ್ರಸ್ಟ್ ಕಡೆಯಿಂದ ಉಚಿತ ಆನ್ಲೈನ್ ತರಬೇತಿ ನೀಡಲಾಗುತ್ತಿದೆ. 

ನವಲಗುಂದ ತಾಲೂಕಿನ ವಿದ್ಯಾರ್ಥಿಗಳು ಈ ಉಚಿತ ಆನ್ಲೈನ್ ತರಬೇತಿ ಪಡೆಯಬಹುದಾಗಿದೆ. ಜನೆವರಿ 12 ರ ಒಳಗೆ ನವಲಗುಂದದಲ್ಲಿರುವ ಅವರ ಜನಸಂಪರ್ಕ ಕಚೇರಿಯಲ್ಲಿ ಅರ್ಜಿ ನೀಡಲು ವಿನೋದ ಅಸೂಟಿ ವಿನಂತಿಸಿದ್ದಾರೆ. 

ವಿನೋದ ಅಸೂಟಿಯವರು ಈಗಾಗಲೇ ಸ್ಪರ್ಧಾತ್ಮಕ ಪರೀಕ್ಷೆಗೆ ವಿದ್ಯಾರ್ಥಿಗಳಿಗೆ ತರಬೇತಿ ಶಿಬಿರ ನಡೆಸಿ ಯಶಸ್ವಿಯಾಗಿದ್ದಾರೆ.

NTPS Graduated application start date 21/10/2025 and application end date 27/12/2025 (5810) 

 

NTPC under Graduate application start date 28/10/2025 and application end date 4/12/2025 (3058) 

ALP application start date 12/4/2025 and application end date 19/5/2025 ( 9970) 

GROUP -D application start date 21/1/2026 and application end date 20/2/26 (22000)

SSC GD application start date 1/12/2025 and application end date 31/12/2025 (25487)

SSC MTS application start date 26/6/2025 and application end date 24/7/2025 (9086)

BSF tradesman application start date 26/7/2026 and application end date 24/8/2025 (3588)

ಇವಿಷ್ಟು ಹುದ್ದೆಗಳಿಗೆ ಶೀಘ್ರದಲ್ಲಿ ನೇಮಕಾತಿ ನಡೆಯಲಿದ್ದು, ನವಲಗುಂದ ವಿಧಾನಸಭಾ ಕ್ಷೇತ್ರದ ಯುವಕ ಯುವತಿಯರು ಇದರ ಲಾಭ ಪಡೆದುಕೊಳ್ಳಬೇಕೆಂದು ವಿನೋದ ಅಸೂಟಿಯವರು ವಿನಂತಿಸಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಐತಿಹಾಸಿಕ ಬಜೆಟ್ ಮಂಡಿಸಿದ ಸಿದ್ದರಾಮಯ್ಯನವರನ್ನು ಅಭಿನಂದಿಸಿದ ಇಸ್ಮಾಯಿಲ್ ತಮಟಗಾರ

ಧಾರವಾಡ ಅಂಜುಮನ್ ಇಸ್ಮಾಯಿಲ್ ತಮಟಗಾರ ಅವರು 17 ನೇ ಐತಿಹಾಸಿಕ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಅಭಿನಂಧಿಸಿದರು. ಬಜೆಟ್ ನಲ್ಲಿ  ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ವಿಶೇಷ ಯೋಜನೆಗಳನ್ನು ಕೊಟ್ಟಿರುವ

Live Cricket

error: Content is protected !!