ಧಾರವಾಡದ ಜನನಿಬಿಡ ರಸ್ತೆಯಲ್ಲಿ ಹಾಡುಹಗಲೇ ಕೊಲೆ ಯತ್ನ ನಡೆದಿದೆ. ಧಾರವಾಡದ ನಾಜ್ ಚಿಕನ್ ಅಂಗಡಿಯಲ್ಲಿ ಕೆಲಸ ಮಾಡುವ ಸೂಫಿಯಾನ್ ಎಂಬಾತ, ನದಿಮ್ ಎಂಬಾತನ ಮೇಲೆ ಮಾರಣಾಂತಿಕ ದಾಳಿ ಮಾಡಿದ್ದಾನೆ.
ನೆಹರು ನಗರದ ನಿವಾಸಿ ಸೂಫಿಯಾನ್ ಎಂಬಾತ ಕೊಲೆಗೆ ಯತ್ನಿಸಿದ್ದು, ಆತನನ್ನು ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ನದಿಮ್ ಎಂಬಾತನ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಗಾಯಗೊಂಡಿರುವ ನದಿಮ್ ನನ್ನು ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ.

Author: Karnataka Files
Post Views: 1,149





