Download Our App

Follow us

Home » ಭಾರತ » ಬೆಳಗಾವಿ ಗಡಿಯಲ್ಲಿ 400 ಕೋಟಿ ರೂಪಾಯಿ ದರೋಡೆ. ಮೂರು ರಾಜ್ಯಗಳಲ್ಲಿ ಪೊಲೀಸ್ ಶೋಧ..

ಬೆಳಗಾವಿ ಗಡಿಯಲ್ಲಿ 400 ಕೋಟಿ ರೂಪಾಯಿ ದರೋಡೆ. ಮೂರು ರಾಜ್ಯಗಳಲ್ಲಿ ಪೊಲೀಸ್ ಶೋಧ..

ಬೆಳಗಾವಿಯ ಗಡಿ ಭಾಗದ ಚೋರ್ಲಾ ಘಾಟ್ ನಲ್ಲಿ 400 ಕೋಟಿ ರೂಪಾಯಿ ಇದ್ದ ಎರಡು ಕಂಟೆನರ್ ಗಳನ್ನು ದರೋಡೆ ಮಾಡಿದ ವಿಷಯ ತಡವಾಗಿ ಬೆಳಕಿಗೆ ಬಂದಿದೆ. 

ಕಳೆದ ವರ್ಷದ ಅಕ್ಟೋಬರ್ 16 ರಂದು ಚೋರ್ಲಾ ಘಾಟ್ ನಲ್ಲಿ ಎರಡು ಕಂಟೆನರ್ ಗಳನ್ನು ದರೋಡೆ ಮಾಡಲಾಗಿತ್ತು. 

ಯುವಕನೊಬ್ಬನ ಅಪಹರಣದ ಪ್ರಕರಣದ ತನಿಖೆ ನಡೆಸುತ್ತಿರುವ ನಾಸಿಕ್ ಪೊಲೀಸರು, ಇಡೀ ಮಹಾರಾಷ್ಟ್ರದಲ್ಲಿ ಸಂಚಲನ ಮೂಡಿಸಿರುವ ಅಪರಾಧವನ್ನು ಬಯಲು ಮಾಡಿದ್ದಾರೆ. 

ಕಳೆದ ವರ್ಷ ಅಕ್ಟೋಬರ್ 16 ರಂದು ಮಹಾರಾಷ್ಟ್ರ ಮತ್ತು ಕರ್ನಾಟಕದ ಗಡಿಯಲ್ಲಿರುವ ಚೋರ್ಲಾ ಘಾಟ್‌ನಲ್ಲಿ ಎರಡು ಕಂಟೇನರ್‌ಗಳನ್ನು ಲೂಟಿ ಮಾಡಲಾಗಿತ್ತು. ಕರ್ನಾಟಕದ ಚೋರ್ಲಾ ಘಾಟ್‌ನಲ್ಲಿ 400 ಕೋಟಿ ರೂ. ಮೌಲ್ಯದ ಕಂಟೇನರ್ ಅನ್ನು ಕದ್ದಿದ್ದಾನೆ ಎಂಬ ಶಂಕೆಯ ಮೇಲೆ ಯುವಕನನ್ನು ಅಪಹರಿಸಲಾಗಿತ್ತು.

ಕ್ರೂರವಾಗಿ ಥಳಿಸಲಾದ ಘಟನೆ ಬೆಳಕಿಗೆ ಬಂದ ಮೇಲೆ ಈ ದರೋಡೆ ಪ್ರಕರಣ ಬಯಲಾಗಿದೆ. ಇದರಲ್ಲಿ ಮುಂಬೈನ ದೊಡ್ಡ ಬಿಲ್ಡರ್‌ಗಳು ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳ ಹೆಸರುಗಳು ತಳಕು ಹಾಕಿಕೊಂಡಿದೆ.

ಮಹಾರಾಷ್ಟ್ರದಲ್ಲಿ ಈ ಪ್ರಕರಣವು ಕೋಲಾಹಲವನ್ನು ಸೃಷ್ಟಿಸಿದೆ ಮತ್ತು ಈ ಪ್ರಕರಣದ ತನಿಖೆಗಾಗಿ ಈಗ ‘ವಿಶೇಷ ತನಿಖಾ ತಂಡ’ (ಎಸ್‌ಐಟಿ) ಅನ್ನು ನೇಮಿಸಲಾಗಿದೆ.

ನಾಸಿಕ್‌ನ ಯುವಕ ಸಂದೀಪ್ ಪಾಟೀಲ್ ಅವರನ್ನು ಅಪಹರಿಸಿದಾಗ ಇಡೀ ವಿಷಯ ಬೆಳಕಿಗೆ ಬಂದಿದೆ ಎನ್ನಲಾಗಿದೆ. 

ಮಹಾರಾಷ್ಟ್ರ ಮುಖ್ಯಮಂತ್ರಿ ಸಚಿವಾಲಯದಿಂದ ಬೆಳಗಾವಿ ಎಸ್ ಪಿ ಗೆ ಪತ್ರ ಬಂದಿದ್ದು, ತನಿಖೆಗೆ ಸಹಕಾರ ನೀಡುವಂತೆ ಮನವಿ ಮಾಡಲಾಗಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಶಾಕೀರ ಸನದಿ ಮಧ್ಯಸ್ಥಿಕೆ ಧಾರವಾಡದಲ್ಲಿಯೇ ಉಳಿದ KIADB ಕಚೇರಿ

ಧಾರವಾಡ KIADB ಕಚೇರಿಯನ್ನು ಧಾರವಾಡದಲ್ಲಿಯೇ ಉಳಿಸಿಕೊಳ್ಳುವಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ ಸನದಿಯವರು ಯಶಸ್ವಿಯಾಗಿದ್ದಾರೆ. ಕೈಗಾರಿಕಾ ಸಚಿವ ಎಮ್ ಬಿ ಪಾಟೀಲ ಅವರ

Live Cricket

error: Content is protected !!