Download Our App

Follow us

Home » ಕಾನೂನು » ಧಾರವಾಡ ಟೋಲ್ ನಾಕಾದಲ್ಲಿ ಟ್ರಾಫಿಕ್ ಪೊಲೀಸರ ಎದುರೇ ರಸ್ತೆಯಲ್ಲಿ ನಿಲ್ಲುತ್ತವೆ ಖಾಸಗಿ ಬಸ್ಸುಗಳು. ಇದು ಮಾಮೂಲಿ ಕಥೆ…..

ಧಾರವಾಡ ಟೋಲ್ ನಾಕಾದಲ್ಲಿ ಟ್ರಾಫಿಕ್ ಪೊಲೀಸರ ಎದುರೇ ರಸ್ತೆಯಲ್ಲಿ ನಿಲ್ಲುತ್ತವೆ ಖಾಸಗಿ ಬಸ್ಸುಗಳು. ಇದು ಮಾಮೂಲಿ ಕಥೆ…..

ಧಾರವಾಡದಲ್ಲಿ ಜನದಟ್ಟನೆಯಿಂದ ಕೂಡಿರುವ ಟೋಲ್ ನಾಕಾ ಬಳಿ ಬೇಂದ್ರೆ ಬಸ್ಸುಗಳು ಟ್ರಾಫಿಕ್ ಪೊಲೀಸರು ಎದುರೇ ನಡು  ರಸ್ತೆಯಲ್ಲಿ ನಿಂತು ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿವೆ.

ದುರ್ದೈವ ಎಂದರೆ ಧಾರವಾಡದ ಟ್ರಾಫಿಕ್ ಪೊಲೀಸರು ಸುಮ್ಮನೆ ನೋಡುತ್ತಾ ಇರುವದು ವಾಹನ ಸವಾರರ ಸಿಟ್ಟಿಗೆ ಕಾರಣವಾಗಿದೆ. ಹೆಲ್ಮೆಟ್ ಹಾಕದ ಕಾರಣ ದಂಡ ವಿಧಿಸುವ ಟ್ರಾಫಿಕ್ ಪೊಲೀಸರು, ಬೇಂದ್ರೆ ಬಸ್ಸಿನವರು ನಡು ರಸ್ತೆಯಲ್ಲಿ ನಿಂತು ಪ್ರಯಾಣಿಕರನ್ನು ಹತ್ತಿಸಿಕೊಂಡರು ಸುಮ್ಮನೆ ಇರುತ್ತಾರೆ.

ಅಡಿವೆಪ್ಪ ಎಂಬ ಟ್ರಾಫಿಕ್ ಪೊಲೀಸ್ ಪೇದೆಗೆ ಬೇಂದ್ರೆ ಬಸ್ಸಿನವರು ನಡು ರಸ್ತೆಯಲ್ಲಿ ನಿಲ್ಲುತ್ತಾರೆ ಅವರ ಮೇಲೆ ಯಾಕೆ ಕ್ರಮವಿಲ್ಲ ಎಂದು ಕೇಳಿದರೆ ಸಾಹೇಬರನ್ನು ಕೇಳಿ ಅಂತಾರೆ.

ಬಡವರಿಗೊಂದು ನ್ಯಾಯ, ಶ್ರೀಮಂತರಿಗೊಂದು ನ್ಯಾಯನಾ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಇದು ಬೇಂದ್ರೆ ಬಸ್ಸಿನ ಮಾಮೂಲಿನ ಕಥೆಯಾಗಿದ್ದು, ರಸ್ತೆ ಅವರದ್ದೆ ಅನ್ನೋ ರೀತಿಯಲ್ಲಿ ವರ್ತಿಸುತ್ತಿರುವದು ನೋಡಿದರೆ, ಸಮಥಿಂಗ್ ಸೆಟಲ್ ಮೆಂಟ್ ( something settlement)  ಅನ್ನೋದು ಗೊತ್ತಾಗುತ್ತದೆ. 

ಹುಬ್ಬಳ್ಳಿ ಧಾರವಾಡ ಮಹಾನಗರದ ಪೊಲೀಸ್ ಇಲಾಖೆಗೆ ತನ್ನದೇ ಆದ ಹೆಸರು ಇದ್ದು, ಟ್ರಾಫಿಕ್ ಪೊಲೀಸ್ ಠಾಣೆ ಸುಧಾರಿಸಬೇಕಿದೆ.

 

Karnataka Files
Author: Karnataka Files

Leave a Comment

RELATED LATEST NEWS

Top Headlines

ಶಾಕೀರ ಸನದಿ ಮಧ್ಯಸ್ಥಿಕೆ ಧಾರವಾಡದಲ್ಲಿಯೇ ಉಳಿದ KIADB ಕಚೇರಿ

ಧಾರವಾಡ KIADB ಕಚೇರಿಯನ್ನು ಧಾರವಾಡದಲ್ಲಿಯೇ ಉಳಿಸಿಕೊಳ್ಳುವಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ ಸನದಿಯವರು ಯಶಸ್ವಿಯಾಗಿದ್ದಾರೆ. ಕೈಗಾರಿಕಾ ಸಚಿವ ಎಮ್ ಬಿ ಪಾಟೀಲ ಅವರ

Live Cricket

error: Content is protected !!