Download Our App

Follow us

Home » ಕಾನೂನು » ಧಾರವಾಡ : ಪುಟಪಾತ್ ಆಕ್ರಮಿಸಿದ್ದ ಓಲಾ ವಾಹನ ಸೀಜ್ ಮಾಡಿದ ಟ್ರಾಫಿಕ್ ಇನ್ಸಪೆಕ್ಟರ್ ಮೇಟಿ

ಧಾರವಾಡ : ಪುಟಪಾತ್ ಆಕ್ರಮಿಸಿದ್ದ ಓಲಾ ವಾಹನ ಸೀಜ್ ಮಾಡಿದ ಟ್ರಾಫಿಕ್ ಇನ್ಸಪೆಕ್ಟರ್ ಮೇಟಿ

ಧಾರವಾಡದ ಜುಬಿಲಿ ಸರ್ಕಲ್ ಮಾರ್ಗದಲ್ಲಿ ಬಹುದಿನಗಳಿಂದ ಪುಟಪಾತ್ ಮೇಲೆ ನಿಲ್ಲಿಸಿದ್ದ ಓಲಾ ಬೈಕ್ ಗಳನ್ನು ಸೀಜ್ ಮಾಡಲಾಗಿದೆ.

ಜನನಿಬೀಡ ರಸ್ತೆಯಾಗಿರುವ ಇಲ್ಲಿ ಓಲಾ ಶೋರೂಮ್ ದವರು ಪುಟಪಾತ್ ಮೇಲೆ ಬೇಕಾಬಿಟ್ಟಿಯಾಗಿ ಓಲಾ ಬೈಕ್ ಗಳನ್ನು ನಿಲ್ಲಿಸಿದ್ದರು. ಇದರಿಂದಾಗಿ ಪಾದಚಾರಿಗಳಿಗೆ ತೊಂದರೆಯಾಗಿತ್ತು.

ಪುಟಪಾತ್ ತೆರವುಗೊಳಿಸುವಂತೆ ಸಂಚಾರಿ ಪೊಲೀಸರು ಎಚ್ಚರಿಕೆ ಕೊಟ್ಟಿದ್ದರು. ಆದರೂ ಬೈಕ್ ಗಳನ್ನು ತೆರವು ಮಾಡದಿರುವ ಕಾರಣ, ಸುಮಾರು 15 ಕ್ಕೂ ಹೆಚ್ಚು ಓಲಾ ಬೈಕಗಳನ್ನು ಸಂಚಾರಿ ಠಾಣೆಯ ಇನ್ಸಪೆಕ್ಟರ್ ಶ್ರೀನಿವಾಸ ಮೇಟಿಯವರು ಬೈಕ್ ಗಳನ್ನು ಸೀಜ್ ಮಾಡಿ, ಪಾದಚಾರಿಗಳಿಗೆ ಅನುಕೂಲ ಮಾಡಿದ್ದಾರೆ.

ಶ್ರೀನಿವಾಸ ಮೇಟಿಯಾವರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

Karnataka Files
Author: Karnataka Files

Leave a Comment

RELATED LATEST NEWS

error: Content is protected !!