ಜೇವರ್ಗಿಯ ಬಡತನದಲ್ಲಿ ಓದಿ ಬದುಕು ಕಟ್ಟಿಕೊಂಡಿದ್ದ ಪಿಎಸ್ಐ ಯಲ್ಲಾಲಿಂಗ ಕನ್ನೂರು ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ.
ಮುಂಡಗೋಡದಲ್ಲಿ ಪಿಎಸ್ಐ ಆಗಿದ್ದ ಅವರು ಜನರೊಂದಿಗೆ ಬೆರೆತು ಉತ್ತಮ ಕರ್ತವ್ಯ ನಿಭಾಯಿಸಿದ್ದರು.
ಕಳೆದ ಒಂದು ತಿಂಗಳಿನಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಧಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೇ ಯಲ್ಲಾಲಿಂಗ ಇಂದು ಕೊನೆಯುಸಿರೆಳೆದಿದ್ದಾರೆ.
ಸ್ನೇಹಿತನ ಅಕಾಲಿಕ ನಿಧನಕ್ಕೆ ಗೆಳೆಯರು ಕಂಬನಿ ಮಿಡಿದಿದ್ದಾರೆ.
Author: Karnataka Files
Post Views: 1,296





