Download Our App

Follow us

Home » ಕಾನೂನು » ಧಾರವಾಡ : ಕೃಷಿ ವಿವಿಯಲ್ಲಿ ಕುಲಪತಿ ಸರ್ವಾಧಿಕಾರಿ ಧೋರಣೆ – ಆಕ್ರಮ ವರ್ಗಾವಣೆಯಲ್ಲಿ ಭಾಗಿ

ಧಾರವಾಡ : ಕೃಷಿ ವಿವಿಯಲ್ಲಿ ಕುಲಪತಿ ಸರ್ವಾಧಿಕಾರಿ ಧೋರಣೆ – ಆಕ್ರಮ ವರ್ಗಾವಣೆಯಲ್ಲಿ ಭಾಗಿ

ದೇಶದಲ್ಲಿ ದೊಡ್ಡ ಹೆಸರು ಮಾಡಿರುವ ಧಾರವಾಡದ ಕೃಷಿ ವಿಶ್ವವಿದ್ಯಾಲಯಲ್ಲಿ ನಡೆಯುತ್ತಿರುವ ಅಕ್ರಮ ವರ್ಗಾವಣೆ ಹಿನ್ನೆಲೆಯಲ್ಲಿ ರಾಜ್ಯಪಾಲರಿಂದ ನೇಮಕವಾಗಿರುವ ಆಡಳಿತ ಮಂಡಳಿ ಸದಸ್ಯರು, ಕುಲಪತಿ ಪಿ ಎಲ್ ಪಾಟೀಲ ವಿರುದ್ಧ ಸಮರ ಸಾರಿದ್ದಾರೆ.  

ರಾಜ್ಯಪಾಲರು ಮತ್ತು ರಾಜ್ಯ ಸರ್ಕಾರದಿಂದ ನಿರ್ದೇಶಿತರಾದ ಆಡಳಿತ ಮಂಡಳಿ ಸದಸ್ಯರು ಇಂದು ಪತ್ರಿಕಾಗೋಷ್ಟಿ ನಡೆಸಿ, ಅವ್ಯವಹಾರ ಹೊರಹಾಕಿದ್ದಾರೆ. 

ವಿವಿಯ ನಿಯಮಗಳನ್ನು ಗಾಳಿಗೆ ತೂರಿ, ನಿರಂತರವಾಗಿ ಕುಲಪತಿಗಳು ವರ್ಗಾವಣೆ ಮಾಡುತ್ತಿದ್ದು, ತಾವೇ ಮಾಡಿದ ವರ್ಗಾವಣೆ ಆದೇಶಗಳನ್ನು ಆಡಳಿತ ಮಂಡಳಿಗೆ ಕೊಡದೇ ಅಕ್ರಮವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಆಡಳಿತ ಮಂಡಳಿ ಸದಸ್ಯರು ಈ ಅಕ್ರಮವನ್ನು, ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳು, ಮತ್ತು ಕೃಷಿ ಸಚಿವರುಗಳ ಗಮನಕ್ಕೆ ತಂದಿದ್ದಾರೆ. 

ಕೃಷಿ ವಿವಿಯಲ್ಲಿ ನಡೆದಿರುವ ಆಕ್ರಮ ವರ್ಗಾವಣೆ ಹಿನ್ನೆಲೆಯಲ್ಲಿ ನಡೆದಿರುವ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡಲು ಸಿದ್ದರಾಗಿದ್ದಾರೆ. 

ಇಲ್ಲಿಯವರೆಗೆ ಅತ್ಯುತ್ತಮ ಕೆಲಸ ನಿರ್ವಹಣೆ ಮಾಡುತ್ತಿದ್ದ 250 ಕ್ಕೂ ಹೆಚ್ಚು ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ ಎಂದು ರವಿ ಮಾಳಗೇರ ಅವರು ಆರೋಪಿಸಿದ್ದಾರೆ. 

ಧಾರವಾಡ ಕೃಷಿ ವಿವಿಯಲ್ಲಿ ಕುಲಪತಿ ಪಿ ಎಲ್ ಪಾಟೀಲ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದು, ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. 

ಧಾರವಾಡ ಕೃಷಿ ವಿವಿ ಕುರಿತು ನಾಳೆ ಕರ್ನಾಟಕ ಫೈಲ್ಸ್  ತನಿಖಾ ವರದಿ ಪ್ರಕಟ ಮಾಡಲಿದ್ದು, ಇವರೆಗೆ ಧಾರವಾಡ ಕೃಷಿ ವಿವಿ ಗೆ ಎಷ್ಟು ಕೋಟಿ ನಷ್ಟವಾಗಿದೆ ಎಂಬುದನ್ನು ಬಹಿರಂಗ ಪಡಿಸಲಿದೆ.

Karnataka Files
Author: Karnataka Files

Leave a Comment

RELATED LATEST NEWS

error: Content is protected !!