ಧಾರವಾಡದಲ್ಲಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಒನ್ ಮ್ಯಾನ್ ಆರ್ಮಿ ಆಡಳಿತ ನಡೆದಿದ್ದು, ಆ ಕಟ್ಟಡದ ಅಂಗಳದಲ್ಲಿ ಅವ್ಯವಹಾರದ ವಾಸನೆ ಬರುತ್ತಿದೆ.
ಅಷ್ಟೇ ಅಲ್ಲಾ, ಕೂಗುಮಾರಿಯ ದರ್ಪ ದೌಲತ್ತಿಗೆ ಅಲ್ಲಿನ ಸಿಬ್ಬಂದಿ ಕೊತ ಕೊತ ಕುದಿಯುತ್ತಿದ್ದಾರೆ. ರಿಯಲ್ ವಿಷಯಕ್ಕೆ ಬರುವದಾದರೇ, ಧಾರವಾಡದ ವಾರ್ತಾ ಇಲಾಖೆಯಲ್ಲಿ ನಕಲಿ ಬಿಲ್ ಸೃಷ್ಟಿಸಿ ಹಣ ಕೊಳ್ಳೆ ಹೊಡೆಯಲಾಗಿದೆಯಂತೆ.
ಇದರಲ್ಲಿ ಪತ್ರಕರ್ತರಿಗೆ ಊಟ ಮಾಡಿಸಿದ ವೆಚ್ಚದ ಬಗ್ಗೆಯೂ ತಕರಾರು ಕೇಳಿ ಬರುತ್ತಿದೆ. ಜನರಲ್ಲಿ ಜಾಗೃತಿ ಮೂಡಿಸುವ ಯೋಜನೆಗಳ ಕುರಿತು, ಬೀದಿ ನಾಟಕ, ಯೋಜನೆಯ ಜಾಗ್ರತಿ ಕಾರ್ಯಕ್ರಮದಲ್ಲೂ ಒಂದಕ್ಕೆ ಎರಡು ಪಟ್ಟು ಹಣ ಖರ್ಚು ಹಾಕಿದ್ದರ ಬಗ್ಗೆ ಸಣ್ಣ ಸುಳಿವು ಸಿಕ್ಕಿದೆ.
ಸರ್ಕಾರಿ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಪತ್ರಕರ್ತರಿಗೆ ಊಟ ಮಾಡಿಸುವ ಪದ್ಧತಿ ಇದ್ದು, ಬದ್ನಿಕಾಯಿ ತಿಂದವರಿಗೆ ಬೆಣ್ಣೆಯ ಲೆಕ್ಕ ಹಚ್ಚಲಾಗಿದೆಯಂತೆ. ಯಾರೋ ಬೇರೆಯವರು ಊಟ ಮಾಡಿಸಿದರು, ಅದಕ್ಕೆ ಸರ್ಕಾರಿ ಲೆಕ್ಕ ಹಚ್ಚಲಾಗಿದೆಯಂತೆ.
ಧಾರವಾಡದ ಪತ್ರಕರ್ತರಿಗೆ ತಮ್ಮದೇ ಆದ Identity ಇದ್ದು, ಊಟ ಮಾಡುವಾಗ, ತಟ್ಟೆಯ ಪೋಟೋ ತೆಗೆದಿಟ್ಟುಕೊಳ್ಳುವದು ಉತ್ತಮ ಎಂಬಂತ ಸ್ಥಿತಿ ನಿರ್ಮಾಣವಾಗಿದೆ.
ಧಾರವಾಡದಲ್ಲಿರುವ ವಾರ್ತಾ ಇಲಾಖೆಯ ಹಿರಿಯ ಉಪ ನಿರ್ಧೆಶಕರ ಹುದ್ದೆ ಖಾಲಿ ಇದ್ದು, ಹಿರಿಯ ಅಧಿಕಾರಿಗಳು ಬರದ ರೀತಿಯಲ್ಲಿ ಸಿಂಪಲ್ ನೌಕರನೊಬ್ಬ ಪ್ರಭಾವ ಬೀರುತ್ತಿದ್ದಾನೆ ಎನ್ನಲಾಗಿದೆ.
ಕರ್ನಾಟಕ ಫೈಲ್ಸ್, ವಾರ್ತಾ ಇಲಾಖೆಯಲ್ಲಿ ನಡೆಯುತ್ತಿರುವ ಮತ್ತಷ್ಟು ಹಲ್ಕಾ ಕಾರ್ಯವನ್ನು ಬಯಲಿಗೆ ಎಳೆಯಲಿದೆ.
ಸರ್ಕಾರಿ ನೌಕರರನ್ನು ಹೆದರಿಸಿ, ಹಣ ಹಾಕಿಸಿಕೊಳ್ಳುತ್ತಿರುವ ಆ ಟ್ರಸ್ಟ್ ಯಾವದು ! ಕರ್ನಾಟಕ ಫೈಲ್ಸ್ ನಲ್ಲಿ ಧಾಖಲೆ ಸಮೇತ ಸುದ್ದಿ





