Download Our App

Follow us

Home » ಕಾನೂನು » ಸರ್ವೇ ಸಿದ್ದನಗೌಡರ ಮನೆ ಮೇಲೆ ಲೋಕಾದಾಳಿ ಹಿಂದೆ ಇದೆಯಾ ಆಡಳಿತ ಮಂಡಳಿಯ ಸದಸ್ಯನ ದುಷ್ಮನಿ?

ಸರ್ವೇ ಸಿದ್ದನಗೌಡರ ಮನೆ ಮೇಲೆ ಲೋಕಾದಾಳಿ ಹಿಂದೆ ಇದೆಯಾ ಆಡಳಿತ ಮಂಡಳಿಯ ಸದಸ್ಯನ ದುಷ್ಮನಿ?

ಧಾರವಾಡದಲ್ಲಿ ಸರ್ವೆ ಸಿದ್ದನಗೌಡರ ಎಂದೇ ಹೆಸರಾದ ಸಿದ್ದನಗೌಡರ ಮನೆ ಹಾಗೂ ಕಚೇರಿ ಮೇಲೆ ಇಂದು ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ನಿನ್ನೆಯಷ್ಟೆ ನೂತನ ಜಿಲ್ಲಾಧಿಕಾರಿಯಾಗಿ ಬಂದಿರುವ ಸ್ನೇಹಲ್ ಅವರಿಗೆ ಸ್ವಾಗತಿಸಿ ಬಂದಿದ್ದ ಸಿದ್ದನಗೌಡರ  ಅವರು ಸಂಘಟನಾ ಚತುರ.

ಎಲ್ಲರೊಂದಿಗೆ ಸ್ನೇಹದಿಂದ ಕಾಣುತ್ತಿದ್ದ ಸಿದ್ದನಗೌಡರಿಗೆ ಆಡಳಿತ ಮಂಡಳಿಯ ಕೆಲವರು ಎದುರಾಗಿದ್ದರು ಎನ್ನಲಾಗಿದೆ. ಸಿದ್ದನಗೌಡರ ಏಳ್ಗೆ ಬಯಸದ ಕೆಲವರು, ಲೋಕಾಯುಕ್ತರಿಗೆ ಮಾಹಿತಿ ನೀಡಿದ್ದರು ಎನ್ನುವ ಚರ್ಚೆಗಳು ಇದೀಗ ಕೇಳಿ ಬರುತ್ತಿವೆ.

ಸಿದ್ದನಗೌಡರ ಮನೆ ಮೇಲೆ ನಡೆದ ಲೋಕಾ ದಾಳಿ ಇನ್ನು ಮುಂದುವರೆಯುತ್ತಿದ್ದು,  ಅದು ತನಿಖೆ ನಡೆಯಲಿ, ಇದರ ಮದ್ಯೆ ಇಂತಹದೊಂದು ಚರ್ಚೆ, ಮಾತುಗಳು ಕೇಳಿ ಬರುತ್ತಿದ್ದು, ಅವರನ್ನು ಖೆಡ್ದಾಕ್ಕೆ ಕೆಡವಲು ನಡೆಸಿದ ಪ್ರಯತ್ನ ಯಶಸ್ಸು ಕಂಡರೂ, ಕಾಲಚಕ್ರ ಹೀಗೆ ಇರಲ್ಲ ಅನ್ನೋದನ್ನ ಅವರನ್ನು ಖೆಡ್ಡಾಕ್ಕೆ ಕೆಡವಿದವರು ತಿಳಿದುಕೊಳ್ಳಬೇಕು ಎಂದು ಸರ್ಕಾರಿ ನೌಕರರ ಬಳಗ ಮಾತನಾಡಿಕೊಳ್ಳುತ್ತಿದೆ. 

Karnataka Files
Author: Karnataka Files

Leave a Comment

RELATED LATEST NEWS

error: Content is protected !!