ನೇಮಕಾತಿಗಾಗಿ ಆಗ್ರಹಿಸಿ ಇಂದು ಧಾರವಾಡದಲ್ಲಿ ನಡೆದ ಬೃಹತ್ ಪ್ರತಿಭಟನೆಯನ್ನು ಅವಳಿ ನಗರದ ಪೊಲೀಸರು ತಾಳ್ಮೆಯಿಂದ ನಿಭಾಯಿಸಿದರು.
ಉದ್ಯೋಗಾಕಾಂಕ್ಷಿಗಳ ಮಡುಗಟ್ಟಿದ್ದ ಆಕ್ರೋಶ ಕಟ್ಟೆ ಒಡೆಯದಂತೆ ಪೊಲೀಸ್ ಇಲಾಖೆ ಬಹಳ ಶ್ರಮ ಹಾಕಿತು.
ಪ್ರತಿಭಟನೆ ವೇಳೆ ಕಿಡಗೇಡಿಗಳು ಪೊಲೀಸ್ ಆಯುಕ್ತ ಶಶಿಕುಮಾರ ಅವರ ಹೊಟ್ಟೆಗೆ ತಿವಿದಿದ್ದು, ವಿದ್ಯಾಗಿರಿ ಠಾಣೆ ಇನ್ಸಪೆಕ್ಟರ್ ರಫೀಕ್ ತಹಸೀಲ್ದಾರ್ ಅವರ ತಲೆಗೆ ಕಲ್ಲಿನೇಟು ಬಿದ್ದಿದ್ದು, ಪಿ ಎಸ್ ಐ ಸುನೀಲ್ ಎಂಬುವರಿಗೆ ಕೈಗೆ ಗಾಯವಾದರು ಯಾರು ಸಹ ತಾಳ್ಮೆ ಕಳೆದುಕೊಳ್ಳದೆ ಇರುವದು ಗಮನ ಸೆಳೆಯಿತು.
ರೊಚ್ಚಿಗೆದ್ದ ವಿದ್ಯಾರ್ಥಿಗಳಿಗೆ ಬದುಕಿನ ಪಾಠ ಮಾಡಿದ ಎನ್ ಶಶಿಕುಮಾರ ಅವರು, ಸೇರಿದಂತೆ ಪೊಲೀಸರು ಇಡೀ ಪ್ರತಿಭಟನೆ ದಾರಿ ತಪ್ಪದಂತೆ ನೋಡಿಕೊಂಡರು.
ಧಾರವಾಡದ ತುಂಬಾ ಅಚ್ಚುಕಟ್ಟಾಗಿ ಪೊಲೀಸ್ ಬಂದುಬಸ್ತ ಮಾಡಿದ್ದರ ಪರಿಣಾಮ, ಪ್ರತಿಭಟನೆ ಸುಸೂತ್ರವಾಗಿ ಕೊನೆಗೊಂಡಿತು.
ನಿನ್ನೆ ರಾತ್ರಿ ಬೇರೊಂದು ಘಟನೆಯನ್ನು ತಣ್ಣಗಾಗಿಸಿ ಬಂದಿದ್ದ ಪೊಲೀಸರು ಮತ್ತು ಅಧಿಕಾರಿಗಳು ಮತ್ತೆ ಇವತ್ತು ಬೆಳಿಗ್ಗೆ 6 ಘಂಟೆಯಿಂದ ಬಂದುಬಸ್ತನಲ್ಲಿ ತೊಡಗಿದ್ದು ವಿಶೇಷವಾಗಿತ್ತು.





