ಧಾರವಾಡ KIADB ಕಚೇರಿಯನ್ನು ಧಾರವಾಡದಲ್ಲಿಯೇ ಉಳಿಸಿಕೊಳ್ಳುವಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ ಸನದಿಯವರು ಯಶಸ್ವಿಯಾಗಿದ್ದಾರೆ.
ಕೈಗಾರಿಕಾ ಸಚಿವ ಎಮ್ ಬಿ ಪಾಟೀಲ ಅವರ ಜೊತೆ ಮಾತನಾಡಿದ ಅವರು, KIADB ಕಚೇರಿಯನ್ನು ಧಾರವಾಡದಿಂದ ಬೆಳಗಾವಿಗೆ ಸ್ಥಳಾಂತರಿಸುವದರಿಂದ ಈ ಭಾಗದ ರೈತರಿಗೆ ತೊಂದರೆಯಾಗುವದನ್ನು ಅವರ ಗಮನಕ್ಕೆ ತಂದರು.
ಶಾಕೀರ ಸನದಿಯವರ ಮಾತಿಗೆ ಸ್ಪಂಧಿಸಿದ ಸಚಿವ ಎಮ್ ಬಿ ಪಾಟೀಲ ಅವರು ಯಾವದೇ ಕಾರಣಕ್ಕೂ ಈ ಕಚೇರಿಯನ್ನು ಸ್ಥಳಾಂತರ ಮಾಡುವದಿಲ್ಲ ಎಂದು ತಿಳಿಸಿದ್ದಾರೆ.
Author: Karnataka Files
Post Views: 81




