ಸಾಂಸ್ಕೃತಿಕ ನಗರಿ ಧಾರವಾಡ ನಾಳೆ ಬಣ್ಣದಾಟಕ್ಕೆ ಸಜ್ಜಾಗುತ್ತಿದೆ. ಧಾರವಾಡದಲ್ಲಿ ನಾಳೆ ಅದ್ದೂರಿಯಾಗಿ ಹೋಳಿ ಆಚರಿಸಲಾಗುತ್ತಿದೆ.
ಧಾರವಾಡದ ವಿವಿದೆಡೆ ವಿವಿಧ ಸಂಘಟನೆಗಳು ರೇನ್ ಡಾನ್ಸ್ ಹಾಗೂ ಡಿಜೆ ಡಾನ್ಸ್ ಹಮ್ಮಿಕೊಂಡಿವೆ.

ಸಂಗಮ ಸರ್ಕಲ್ ನಲ್ಲಿ ಹೆಗಡೆ ಗ್ರೂಪ್ ನವರು,
ಜಯನಗರದಲ್ಲಿ, ಶ್ರೀಗಂಧ ಸೇಠ ಅಭಿಮಾನಿಗಳು,
ಶಿವಾಜಿ ಸರ್ಕಲ್ ನಲ್ಲಿ ಶಾಸಕ ವಿನಯ ಕುಲಕರ್ಣಿ ಬ್ರಿಗೇಡ್,
ಹಾಗೂ ಎಲ್ ಐ ಸಿ ಸರ್ಕಲ್ ಬಳಿ ಶಾಸಕ ಅರವಿಂದ ಬೆಲ್ಲದ ಬಳಗದವರು ರೇನ್ ಡಾನ್ಸ್ ಹಾಗೂ ಡಿಜೆ ಡಾನ್ಸ್ ಹಮ್ಮಿಕೊಂಡಿದ್ದಾರೆ.
ಇವೆಲ್ಲ ಕಾರ್ಯಕ್ರಮಗಳಲ್ಲಿ ಧಾರವಾಡದ ಜನರು ಶಿಸ್ತು, ಸಭ್ಯತೆ ಮತ್ತು ಶಾಂತಿಯಿಂದ ಭಾಗವಹಿಸುವಂತೆ ಸಂಘಟಕರು ಮನವಿ ಮಾಡಿದ್ದಾರೆ.
ವಿಶೇಷವಾಗಿ ಯುವತಿಯರಿಗೆ ಪ್ರತ್ತೈಕವಾಗಿ ಸ್ಥಳ ನಿಗದಿ ಮಾಡಿದ್ದು, ಯುವಕರು ಸಭ್ಯರೀತಿಯಿಂದ ನಡೆದುಕೊಳ್ಳಬೇಕಾಗಿದೆ.
ಹೋಳಿ ಹಬ್ಬ ಹಾಗೂ ರಮಜಾನ್ ಹಬ್ಬ ಏಕಕಾಲಕ್ಕೆ ಬಂದಿದ್ದು, ಒಬ್ಬರನ್ನೊಬ್ಬರು ಗೌರವಿಸುವಂತೆ ಕರ್ನಾಟಕ ಫೈಲ್ಸ್ ಮನವಿ ಮಾಡಿಕೊಳ್ಳುತ್ತದೆ.
Author: Karnataka Files
Post Views: 677





