Download Our App

Follow us

Home » ಹಬ್ಬಗಳು » ಧಾರವಾಡದಲ್ಲಿ ವಿನಯ ಕುಲಕರ್ಣಿ ಬ್ರಿಗೇಡ್ ವತಿಯಿಂದ ಮೊಳಗಿದ ಜಗ್ಗಲಗಿ ನಾದ

ಧಾರವಾಡದಲ್ಲಿ ವಿನಯ ಕುಲಕರ್ಣಿ ಬ್ರಿಗೇಡ್ ವತಿಯಿಂದ ಮೊಳಗಿದ ಜಗ್ಗಲಗಿ ನಾದ

ಧಾರವಾಡದಲ್ಲಿಂದು ವಿನಯ ಕುಲಕರ್ಣಿ ಬ್ರಿಗೇಡ್ ವತಿಯಿಂದ ‘ಹಲಗೆ ಹಬ್ಬ’ ಆಚರಿಸಲಾಯಿತು.

ಅಮ್ಮಿನಬಾವಿಯ ಷ. ಬ್ರ. ಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಸನ್ನಿಧಿಯಲ್ಲಿ ನಡೆದ ಕಾರ್ಯಕ್ರಮವನ್ನು ಶಿವಲೀಲಾ ಕುಲಕರ್ಣಿಯವರು ಉದ್ಘಾಟನೆ ಮಾಡಿದರು.

ಹೋಳಿ ಹುಣ್ಣಿಮೆಯ ಅಂಗವಾಗಿ ನಗರದ ಕಲಾಭವನದ ಆವರಣದಿಂದ ಆರಂಭವಾದ ಜಗ್ಗಲಿಗೆ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

ವಿವಿಧ ಕಡೆಗಳಿಂದ ಆಗಮಿಸಿದ್ದ ಜಗ್ಗಲಗಿ ತಂಡಗಳು, ಡೊಳ್ಳು ಕುಣಿತ, ಗೊಂಬೆ ಕುಣಿತ ಹಾಗೂ ನೂರಾರು ಹಲಗೆ ವಾದಕರ ಅಬ್ಬರದ ನಾದ ಧಾರವಾಡದ ಜನತೆಯನ್ನು ರೋಮಾಂಚನಗೊಳಿಸಿತು.

ಮೆರವಣಿಗೆಯು ಶಿವಾಜಿ ವೃತ್ತದಲ್ಲಿ ಸಮಾಪ್ತಿಗೊಂಡಿತು. ಈ ಸಂದರ್ಭದಲ್ಲಿ ವಿನಯ ಕುಲಕರ್ಣಿ ಬ್ರಿಗೇಡ್ ಅಧ್ಯಕ್ಷ ಅರವಿಂದ ಏಗನಗೌಡರ, ಪಾಲಿಕೆ ಸದಸ್ಯರಾದ ಪ್ರಕಾಶ ಘಾಟಗೆ, ರಾಜು ಕಮತಿ, ದೀಪಾ ನೀರಳಕಟ್ಟಿ, ಮುಖಂಡರಾದ ಚನ್ನಬಸಪ್ಪ ಮಟ್ಟಿ, ಸಿದ್ದಣ್ಣ ಪ್ಯಾಟಿ,

ವಿನಯ್ ಬಾಬರ, ಬಸವರಾಜ್ ಹೆಬ್ಬಳ್ಳಿ, ನವೀನ ಕದಂ, ಗೌರಮ್ಮ ಬಳೋಗಿ ಬಸವರಾಜ್ ಜಾಧವ, ಆನಂದ ಸಿಂಗನಾಥ, ಚಿದಾನಂದ ಚಂದರಗಿ ಸೇರಿದಂತೆ ಬ್ರಿಗೇಡ್‌ನ ಸಾವಿರಾರು ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಕಲಾಭಿಮಾನಿಗಳು ಉಪಸ್ಥಿತರಿದ್ದರು.

Karnataka Files
Author: Karnataka Files

Leave a Comment

RELATED LATEST NEWS

Top Headlines

ರಾಜ್ಯಸಭೆಗೆ ಕರ್ನಾಟಕದಿಂದ ಕಾಂಗ್ರೇಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ : ಮನ್ಸೂರ್ ಅಲಿ ಖಾನ್ ಗೆ ಟಿಕೇಟ್ ಘೋಷಣೆ

ಕರ್ನಾಟಕದಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಕಾಂಗ್ರೇಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟ ಮಾಡಿದೆ. ಕರ್ನಾಟಕದಿಂದ ಅಖಿಲ ಭಾರತ ಕಾಂಗ್ರೇಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪವನ ಖೇರಾ ಹಾಗೂ

Live Cricket

error: Content is protected !!