ಧಾರವಾಡ ಜಿಲ್ಲಾಧಿಕಾರಿಯಾಗಿದ್ದ ದಿವ್ಯ ಪ್ರಭು ವರ್ಗಾವಣೆಗೊಂಡು ಒಂದು ತಿಂಗಳಾಗುತ್ತಾ ಬಂದರು, ಧಾರವಾಡ ಜಿಲ್ಲೆಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ (DIPR ) ಯ ಫೇಸ್ ಬುಕ್ ನಲ್ಲಿ ಮಾತ್ರ ಹಳೆಯ ಜಿಲ್ಲಾಧಿಕಾರಿ ಕುಳಿತಿರುವ ಭಾವಚಿತ್ರ ಇರುವದು ಸೋಜಿಗ ಮೂಡಿಸಿದೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ facebook ಹಾಗೂ X ಸಾಮಾಜಿಕ ಜಾಲತಾಣಗಳನ್ನು ವಾರ್ತಾ ಇಲಾಖೆ ನೋಡಿಕೊಳ್ಳುತ್ತದೆ.
ಧಾರವಾಡ ಜಿಲ್ಲೆಗೆ ಫೆಬ್ರವರಿ 11 ರಂದು ಜಿಲ್ಲಾಧಿಕಾರಿಯಾಗಿ ಬಂದಿರುವ ಶ್ರೀಮತಿ, ಸ್ನೇಹಲ್ ಅವರು ಕರ್ತವ್ಯದಲ್ಲಿ ತೊಡಗಿದ್ದಾರೆ. ಪ್ರತಿನಿತ್ಯ ಸಾರ್ವಜನಿಕರ ಅಹವಾಲು ಆಲಿಸುತ್ತಾ, ಸಮಸ್ಯೆಗಳಿಗೆ ಕಿವಿಯಾಗಿದ್ದಾರೆ.
ವಾರ್ತಾ ಸಹಾಯಕ ಸುರೇಶ ಅವರು , ನೂತನ ಜಿಲ್ಲಾಧಿಕಾರಿಯಾಗಿ ಸ್ನೇಹಲ್ ಅವರು ಬಂದ ನಂತರ ಹಳೆಯ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರ ಪೋಟೋ ತೆಗೆಯುವ ಮನಸ್ಸು ಮಾಡದಿರುವದು ” ಮರೆತೆನೆಂದರ ಮರೆಯಲಿ ಹ್ಯಾಂಗ ” ಎಂಬ ಗೀತೆ ನೆನಪಿಗೆ ಬರುತ್ತದೆ.
ನಿರ್ಗಮಿತ ಜಿಲ್ಲಾಧಿಕಾರಿಗಳ ಜೊತೆ ಇದ್ದ ಸುರೇಶ ಅವರ ಹತ್ತಿರದ ಒಡನಾಟ ಜಿಲ್ಲಾಧಿಕಾರಿಗಳ ಕಚೇರಿಯ ಸಿಬ್ಬಂದಿಗಳು ಹೆದರುವಂತ ಪರಿಸ್ಥಿತಿ ನಿರ್ಮಾಣ ಮಾಡಿತ್ತು ಎನ್ನಲಾಗಿದೆ. ಹಿಂದಿನ ಜಿಲ್ಲಾಧಿಕಾರಿಗಳ ಹೆಸರನ್ನು ದುರ್ಬಳಕೆ ಮಾಡಿಕೊಂಡ ಬಗ್ಗೆ ಕಂದಾಯ ಇಲಾಖೆಯ ಸಿಬ್ಬಂದಿ ADC ಹಾಗೂ AC ಅವರ ಗಮನಕ್ಕೆ ತಂದಿದ್ದರು ಎನ್ನಲಾಗಿದೆ.
ಹೀಗಾಗಿ ದಿವ್ಯ ಪ್ರಭು ಅವರ ಜಾಗಕ್ಕೆ ಸ್ನೇಹಲ್ ಅವರು ಬಂದರು ಸಹ ಇನ್ನುವರೆಗೆ DIPR ಧಾರವಾಡ ಎಂಬ ಹೆಸರಿನಲ್ಲಿರುವ facebook ಖಾತೆಯಲ್ಲಿ ಈಗಲೂ ಸಹ ಹಳೆಯ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರ ಫೋಟೋ ಇದ್ದು, ಧಾರವಾಡ ಜಿಲ್ಲೆಯ ಜಿಲ್ಲಾಧಿಕಾರಿ ಯಾರು ಅನ್ನೋ ಗೊಂದಲ ಮೂಡಿಸಿದೆ.





