Download Our App

Follow us

Home » ಕಾನೂನು » ಧಾರವಾಡ ಉಪನಗರ ಪೋಲೀಸ್ ಠಾಣೆಯಲ್ಲಿ ಓನ್ಲಿ ಡಿಲಿಂಗ್. ದೂರು ಧಾಖಲಾದರೆ ಇಲ್ಲಿನ ಕೆಲವರಿಗೆ ಹಬ್ಬದ ಖುಷಿ

ಧಾರವಾಡ ಉಪನಗರ ಪೋಲೀಸ್ ಠಾಣೆಯಲ್ಲಿ ಓನ್ಲಿ ಡಿಲಿಂಗ್. ದೂರು ಧಾಖಲಾದರೆ ಇಲ್ಲಿನ ಕೆಲವರಿಗೆ ಹಬ್ಬದ ಖುಷಿ

ಅಲ್ಪ ಸ್ವಲ್ಪ ಮರ್ಯಾದೆ ಉಳಿಸಿಕೊಂಡಿದ್ದ ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿನ ಕೆಲ ಸಿಬ್ಬಂದಿ    ಖಾಕಿಗೆ ಕಳಂಕ ತರುವ ಕೆಲಸದಲ್ಲಿ ತೊಡಗಿದ್ದಾರೆ. 

ದಕ್ಷ ಪೊಲೀಸ್ ಅಧಿಕಾರಿಗಳನ್ನು ಕಂಡಿರುವ, ಧಾರವಾಡ ಉಪನಗರ ಪೊಲೀಸ್ ಠಾಣೆ, ಇತಿಹಾಸದಲ್ಲಿಯೇ ಇಷ್ಟೊಂದು ಕೆಟ್ಟ ಸ್ಥಿತಿಗೆ ಬಂದಿರಲಿಲ್ಲ. ಕೆಲ ಸಿಬ್ಬಂದಿಗಳಿಂದಾಗಿ ಉಪನಗರ ಪೊಲೀಸ್ ಠಾಣೆ ಜನರ ನಂಬಿಕೆ ಕಳೆದುಕೊಳ್ಳುತ್ತಿದೆ.

ದೂರು ಧಾಖಲಾಗುವದನ್ನೇ,  ಬಕಪಕ್ಷಿಯಂತೆ ಕಾಯುತ್ತ ಕುಳಿತುಕೊಳ್ಳುವ ಕೆಲ ಸಿಬ್ಬಂದಿ, ಯಾರ ಮೇಲೆ ದೂರು ಧಾಖಲಾಗತ್ತೋ ಅವರನ್ನು ತನಿಖೆಗೆ ಒಳಪಡಿಸುವ ಬದಲು ಅವರ ಜೊತೆ ಡೀಲ್ ಗೆ ಇಳಿಯುತ್ತಾರೆ. ಹೇಗೆ ಡೀಲ್ ಗೆ ಇಳಿಯುತ್ತಾರೆ ಅನ್ನೋದನ್ನ ನೋಡುವದಾದರೆ, 

ದೊಡ್ಡ ನಾಯಕನಕೊಪ್ಪ ವ್ಯಾಪ್ತಿಯ ಸರ್ವೆ ನಂಬರ 6/2 ಪೈಕಿ 8.8 ಗುಂಟೆ ಜಮೀನನ್ನು ಲ್ಯಾಂಡ್ ಮಾಫಿಯಾ ಕಿಂಗ್ ಪಿನ್ ಗಳು ನಕಲಿ ಧಾಖಲೆ ಸೃಷ್ಟಿಸಿ ಕೊಳ್ಳೆ ಹೊಡೆಡಿದ್ದಾರೆ ಅನ್ನೋ ದೂರು 2025 ರ ಅಕ್ಟೋಬರ್ 23 ರಂದು ಧಾಖಲಾಗುತ್ತದೆ. 

ಭಾರತೀಯ ನೌಕಾ ಪಡೆಯ ಮೂರನೇ ಅತೀ ದೊಡ್ಡ ಹುದ್ದೆಯಲ್ಲಿರುವ ರಿಯರ್ ಅಡ್ಮಿರಲ್ ರಿಗೆ ಸೇರಿದ ಜಮೀನಿನನ್ನು ಕೆಲವರು ಕಬಳಿಸಿದ್ದರ ಬಗ್ಗೆ ದೂರು ಧಾಖಲಾದ ನಂತರ ಲ್ಯಾಂಡ್ ಮಾಫಿಯಾದವರನ್ನು ಬಂಧಿಸಿ ಕರೆತರಬೇಕಾದ ಸಿಬ್ಬಂದಿ, ಅವರು ನಿರೀಕ್ಷಣಾ ಜಾಮೀನು ಪಡೆಯುವವರೆಗೂ ಅವಕಾಶ ಮಾಡಿಕೊಡುತ್ತಾರೆ. 

ದೂರು ಕೊಟ್ಟವರು, ನಮ್ಮ ಪ್ರಕರಣದ ಏನಾಯ್ತು ಅಂತಾ ಕೇಳಿದರೆ,   ಅವರು ಹುಡುಕಿದರು ಸಿಗುತ್ತಿಲ್ಲ ಎಂಬ ಸಬೂಬು ಕೊಡುತ್ತಾರೆ. ದೂರು ಕೊಟ್ಟವರು, ಅವರು ಇರುವ ಸ್ಥಳದ ಬಗ್ಗೆ ಖಚಿತ ಮಾಹಿತಿ ಕೊಟ್ಟರು ಸಹ ಯಾವದೆ ಕ್ರಮಕ್ಕೆ ಮುಂದಾಗುವದಿಲ್ಲ. 

ಈ ವಿಷಯದಲ್ಲಿ ಉಪನಗರ ಠಾಣೆಯ ಅಂದಿನ ಓರ್ವ ಪಿಎಸ್ಐ ಹಾಗೂ ಸಧ್ಯ ಇರುವ, ಎ ಎಸ್ ಐ ಒಬ್ಬರು ಡೀಲ್ ಮಾಡಿರುವ ಬಗ್ಗೆ ಕರ್ನಾಟಕ ಫೈಲ್ಸ್ ಗೆ ಸಾಕ್ಷ್ಯಗಳು ಲಭ್ಯವಾಗಿವೆ.

ಸಧ್ಯ ಪ್ರಭಾರಿ ಇರುವ ಇನ್ಸಪೆಕ್ಟರ್ ಪ್ರಭು ಗಂಗೇನಹಳ್ಳಿಯವರಿಗೆ ಠಾಣೆಯಲ್ಲಿ ನಡೆದಿರುವ ಡೀಲ್ ಬಗ್ಗೆ ಗಮನ ಸೆಳೆದರು, ಇನ್ನೂವರೆಗೆ ಯಾವದೇ ತನಿಖೆ ನಡೆಯದಿರುವದು ಖಾಕಿ ಮೇಲೆ ಇರುವ ನಂಬಿಕೆ ಕಳೆದುಕೊಳ್ಳುವ ಸ್ಥಿತಿಗೆ ಬಂದಿದೆ. 

ಧಾರವಾಡ ಉಪನಗರ ಠಾಣೆಯಲ್ಲಿ ನಡೆದಿರುವ ಭ್ರಷ್ಟಾಚಾರ, ನಡೆದಿರುವ ಡೀಲ್ ಬಗ್ಗೆ ಕರ್ನಾಟಕ ಫೈಲ್ಸ್ ಸಾಕ್ಷ ಸಮೇತ ಬಯಲಿಗೆಳೆಯಲಿದೆ. 

ಯಾರೋ ಕೆಲ ಸಿಬ್ಬಂದಿ ಮಾಡಿದ ತಪ್ಪಿಗೆ ಇಡೀ ಠಾಣೆಗೆ ಕೆಟ್ಟ ಹೆಸರು ಬರುತ್ತಿದೆ. ಅಂತಹವರು ಯಾರು ಅನ್ನೋದು ಇನ್ಸಪೆಕ್ಟರ್ ಪ್ರಭು ಗಂಗೇನಹಳ್ಳಿಯವರಿಗೂ ಗೊತ್ತಿದೆ. ಈ ವಿಷಯವನ್ನು ಸಹ ಬಿಜೆಪಿ ಗಂಭೀರವಾಗಿ ತೆಗೆದುಕೊಂಡಿದೆ. 

ಉಪನಗರ ಪೊಲೀಸ್ ಠಾಣೆ, ಬಹುತೇಕ ಡೀಲ್ ಠಾಣೆಯಾಗಿ ಬದಲಾಗಿದ್ದು, ಮೋಸ ಮಾಡುವವರಿಗೆ ಇಲ್ಲಿ ಮರ್ಯಾದೆ ಸಿಗುತ್ತದೆ, ಹೊರತಾಗಿ, ಮೋಸ ಹೋದವರಿಗೆ ನ್ಯಾಯ ಮರಿಚಿಕೆಯಾಗಿದೆ.

 

 

Karnataka Files
Author: Karnataka Files

Leave a Comment

RELATED LATEST NEWS

Top Headlines

ರಾಜ್ಯಸಭೆಗೆ ಕರ್ನಾಟಕದಿಂದ ಕಾಂಗ್ರೇಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ : ಮನ್ಸೂರ್ ಅಲಿ ಖಾನ್ ಗೆ ಟಿಕೇಟ್ ಘೋಷಣೆ

ಕರ್ನಾಟಕದಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಕಾಂಗ್ರೇಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟ ಮಾಡಿದೆ. ಕರ್ನಾಟಕದಿಂದ ಅಖಿಲ ಭಾರತ ಕಾಂಗ್ರೇಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪವನ ಖೇರಾ ಹಾಗೂ

Live Cricket

error: Content is protected !!