Download Our App

Follow us

Home » ಕಾನೂನು » ಧಾರವಾಡ : ಪ್ರತ್ತೈಕ ಪಾಲಿಕೆ ಹೋರಾಟಕ್ಕೆ ಜಾಗೃತಗೊಂಡ ಕೇಂದ್ರ ಸಚಿವ ಜೋಶಿ, ರಾಜ್ಯಪಾಲರ ಭೇಟಿಗೆ ಸಮಯ ಕೇಳಿ ಪತ್ರ

ಧಾರವಾಡ : ಪ್ರತ್ತೈಕ ಪಾಲಿಕೆ ಹೋರಾಟಕ್ಕೆ ಜಾಗೃತಗೊಂಡ ಕೇಂದ್ರ ಸಚಿವ ಜೋಶಿ, ರಾಜ್ಯಪಾಲರ ಭೇಟಿಗೆ ಸಮಯ ಕೇಳಿ ಪತ್ರ

ಧಾರವಾಡ ಪ್ರತ್ತೈಕ ಪಾಲಿಕೆ ವಿಷಯದಲ್ಲಿ ರಾಜಕೀಯ ಪಕ್ಷಗಳು ಜಿದ್ದಿಗೆ ಬಿದ್ದಿದ್ದು, ಮೊದಲ ಹಂತದ ಹೋರಾಟಕ್ಕೆ ಜೈ ಎಂದಿದ್ದ ಬಿಜೆಪಿ ತದನಂತರ ಉಲ್ಟಾ ಹೊಡೆದಿದ್ದು ಆಕ್ರೋಶಕ್ಕೆ ಕಾರಣವಾಗಿತ್ತು.

ನಿನ್ನೆಯಿಂದ ಆರಂಭವಾಗಿದ್ದ ಹೋರಾಟದ ವೇದಿಕೆಯಲ್ಲಿ ಕೇಂದ್ರ ಸಚಿವ ಪ್ರಲ್ಲಾದ ಜೋಶಿಯವರಿಗೆ ದಿಕ್ಕಾರದ ಫಲಕಗಳನ್ನು ಹಾಕಲಾಗಿತ್ತು.

ಇದರಿಂದ ಎಚ್ಚೆತ್ತುಕೊಂಡ ಕೇಂದ್ರ ಸಚಿವ ಪ್ರಲ್ಲಾದ ಜೋಶಿಯವರು, ಪ್ರತ್ತೈಕ ಪಾಲಿಕೆ ಬಗ್ಗೆ ಚರ್ಚೆ ನಡೆಸಲು ಸಮಯ ನೀಡುವಂತೆ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.

ಅದರ ಒಂದು ಪ್ರತಿಯನ್ನು ಬಿ ಡಿ ಹಿರೇಮಠ ಅವರಿಗೆ ಕಳಿಸಲಾಗಿದೆ. ಧಾರವಾಡದಲ್ಲಿ ಪ್ರತ್ತೈಕ್ ಪಾಲಿಕೆಗೆ ಆಗ್ರಹಿಸಿ ಪಕ್ಷಾತೀತ ಹೋರಾಟ ನಡೆದಿದ್ದು, ಜೋಶಿಯವರನ್ನು ಈ ಹೋರಾಟ ಜಾಗೃತಗೂಳಿಸಿದೆ.

ಪಕ್ಷಾತೀತ ಹೋರಾಟಕ್ಕೆ ಮೊದಲ ಹಂತದ ಜಯ ಸಿಕ್ಕಂತಾಗಿದ್ದು, ಹೋರಾಟದ ಪ್ರಮುಖರೊಂದಿಗೆ ಜೋಶಿಯವರು, ರಾಜ್ಯಪಾಲರನ್ನು ಭೇಟಿ ಮಾಡುವ ಅವಕಾಶ ಬಂದೊದಗಿದಂತಾಗಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ನವಲಗುಂದ ನರಗುಂದ ರೈತ ಬಂಡಾಯಕ್ಕೆ 46 ವರ್ಷ ಪೂರ್ಣ : ರೈತರ ಪಾದಕ್ಕೆ ಶರಣಾಗಿದ್ದ ಕಾಂಗ್ರೇಸ್ ಸರ್ಕಾರ : ಅಂದು ನಡೆದಿದ್ದು ಏನು? ಇಲ್ಲಿದೆ ಡಿಟೇಲ್ ಸ್ಟೋರಿ

ನವಲಗುಂದ ನರಗುಂದ ರೈತ ಬಂಡಾಯ ನಡೆದು ಇವತ್ತಿಗೆ 46 ವರ್ಷಗಳು ಪೂರ್ಣಗೊಂಡಿವೆ. ಪ್ರತಿ ವರ್ಷ ಜುಲೈ 21 ರಂದು ರೈತರು, ಈ ದಿನವನ್ನು ರೈತ ಹುತಾತ್ಮ ದಿನಾಚರಣೆ

Live Cricket

error: Content is protected !!