ಆಲ್ ಕರ್ನಾಟಕ ಸುನ್ನಿ ಮಶಾಯಿಖ್ ಕೌನ್ಸಿಲ್ ವತಿಯಿಂದ ರಾಜ್ಯ ಮಟ್ಟದ ಸಾಮಾನ್ಯ ಸಭೆಯಲ್ಲಿ ಹಜರತ್ ಖ್ವಾಜಾ ಬಂದೆ ನವಾಜ್ ದರ್ಗಾದ ಸಜ್ಜಾದಾ ನಶೀನ್ ಹಾಗೂ ಕರ್ನಾಟಕ ವಕ್ಫ್ ಬೋರ್ಡ್ ಅಧ್ಯಕ್ಷರಾದ ಡಾ. ಸಯ್ಯದ್ ಮುಹಮ್ಮದ್ ಅಲಿ ಅಲ್ ಹುಸೈನಿ ಅವರನ್ನು ಅವಿರೋಧವಾಗಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಇವರ ಹೆಸರನ್ನು ಹಜರತ್ ಸಯ್ಯದ್ ಶಾ ಹಸನ್ ಶಬ್ಬಿರ್ ಮಹಮ್ಮದ್ ಅಲ್ ಹುಸೇನಿ ಅವರು ಸಭೆಯಲ್ಲಿ ಘೋಷಣೆ ಮಾಡಿದರು.
ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ವಾರ್ಷಿಕ ಸಾಮನ್ಯಸಭೆಯಲ್ಲಿ ಕರ್ನಾಟಕದ 500ಕ್ಕೂ ಹೆಚ್ಚಿನ ದರ್ಗಾಗಳ ಪಿಠಾಧಿಪತಿಗಳು ( ಧರ್ಮಗುರುಗಳು) ಈ ಸಭೆಯಲ್ಲಿ ಭಾಗಿಯಾಗಿದ್ದರು.
ಆಲ್ ಕರ್ನಾಟಕ ಸುನ್ನಿ ಮಶಾಯಿಖ್ ಕೌನ್ಸಿಲ್‌ವು 1998 ರಲ್ಲಿ ಸ್ಥಾಪಿತಗೊಂಡಿದ್ದು, ರಾಜ್ಯದ ವಿವಿಧ ದರ್ಗಾಗಳು, ಖಾನ್ ಖಾಗಳು, ಮಶಾಯಿಖ್‌ಗಳು ಹಾಗೂ ಸುನ್ನಿ ಉಲಮಾಗಳ ಒಗ್ಗಟ್ಟಿನ ವೇದಿಕೆಯಾಗಿದೆ.
ಈ ಸಭೆಯಲ್ಲಿ ಸೂಫಿ ಪರಂಪರೆಯ ಉಳಿವಿಗಾಗಿ ಎಲ್ಲರೂ ಪ್ರೀತಿ ಮತ್ತು ವಿಶ್ವಾಸ ಹಾಗು ಸಹಬಾಳ್ವೆಯೊಂದಿಗೆ ಮುನ್ನಡೆಯುವದು ಅವಶ್ಯಕತೆಯಾಗಿದ್ದು ,ಪ್ರಸ್ತುತ ಸಮಾಜದಲ್ಲಿ ಉದ್ಭವಿಸುತ್ತಿರುವ ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯ ಮತ್ತು ವಕ್ಫ್ ಸಂಬಂಧಿತ ಸಮಸ್ಯೆಗಳ ಕುರಿತು ಚರ್ಚಿನಡೆಸಲಾಯಿತು..

ಇನ್ನು ಈ ಸಭೆಗೆ ಕರ್ನಾಟಕ ಸರಕಾರದ ಮುಖ್ಯ ಸಚೇತಕ ಹಾಗು ವಿಧಾನ ಫರಿಷತ್ ಸದಸ್ಯ ಸಲೀಂ ಆಹ್ಮದ್ ಆಗಮಿಸಿ ನೂತನ ಅಧ್ಯಕ್ಷರಿಗೆ ಶುಭಾಷಯ ಕೋರಿದರು.
ಈ ಸಭೆಯ ಅಧ್ಯಕ್ಷತೆಯನ್ನು ಹಜರತ್ ಪೀರ್ ಸಯ್ಯದ್ ಮೊಹಮ್ಮದ್ ಹಶ್ಮಿ ಜವಾದೇಶ್ ಮಿಯಾ ಸಾಹೇಬ್ ರೌಜಾ ನಗರ ಶರೀಫ್ ವಹಿಸಿದ್ದರು. ಹಜರತ್ ಸಯ್ಯದ್ ಮುರ್ತಜಾ ಮುಫ್ತಿ ಸಾಹೇಬ್ ಖಾದರಿ ಹಾಗು ಡಾ: ಹಜರತ್ ಖ್ವಾಜಾ ಶಾಹ್ ಫಝ್ಲುದ್ದಿನ್ ಜುನೈದ್ ಹಾಗು ಮಶಾಯಿಖ್‌ಗಳು, ಉಲಮಾಗಳು ಮತ್ತು ಸದಸ್ಯರು ಭಾಗಿಯಾಗಿದ್ದರು.
ಸಭೆಯಲ್ಲಿ ಮಾತನಾಡಿದ ನೂತನ ಅಧ್ಯಕ್ಷರಾದ ಅಲಿ ಅಲ್ ಹುಸೈನಿ ರವರು ನಮ್ಮ ಮಕ್ಕಳು ಶಿಕ್ಷಿತರಾಗಬೇಕು. ಪ್ರತಿ ಮಗು ಶಿಕ್ಷಣ ಪಡೆಯಬೇಕು. ನಾವೆಲ್ಲ ಸಮಾಜಕ್ಕೆ ಮಾದರಿ ಆಗಿ ಬದುಕಬೇಕು ಎಂದು ಹೇಳಿದರು.
ಇದೇ ವೇಳೆ ಕರ್ನಾಟಕ ವಿಧಾನ ಪರಿಷತ್ ಸರ್ಕಾರಿ ಮುಖ್ಯ ಸಚೇತಕಾದ ಸಲೀಂ ಅಹ್ಮದ್ ರವರು ನೂತನ ಅಧ್ಯಕ್ಷರಾದ ಅಲಿ ಅಲ್ ಹುಸೇನಿರವರಿಗೆ ಶುಭ ಕೋರಿದರು.





