ಕಡೆಗೂ ಧಾರವಾಡದ ಜನರ ದಶಕದ ಬೇಡಿಕೆಯಾದ ಪ್ರತ್ತೈಕ್ ಪಾಲಿಕೆ ಹೋರಾಟಕ್ಕೆ ಬಹುತೇಕ ಯಶಸ್ಸು ಕಂಡಿದೆ. ಅಂದುಕೊಂಡಂತೆ ನಡೆದರೆ ಮೂರು ದಿನಗಳಲ್ಲಿ ಧಾರವಾಡ ಮಹಾನಗರ ಪಾಲಿಕೆ ಆಸ್ತಿತ್ವಕ್ಕೆ ಬರಲಿದೆ.
ಇಂದು ನಡೆದಿದ್ದೇನು
ಧಾರವಾಡ ಪ್ರತ್ತೈಕ್ ಪಾಲಿಕೆ ರಚನೆಗೆ ತೊಡಕಾಗಿದ್ದ ರಾಜ್ಯಪಾಲರ ಅಂಕಿತಕ್ಕೆ ಸಂಬಂಧಪಟ್ಟಂತೆ ಇಂದು ಕೇಂದ್ರ ಸಚಿವ ಪ್ರಲ್ಲಾದ ಜೋಶಿಯವರು, ಹೋರಾಟಗಾರರೊಂದಿಗೆ ರಾಜ್ಯಪಾಲರನ್ನು ಭೇಟಿ ಮಾಡಿದರು.
ಹೈಕೋರ್ಟ್ ಪೀಠ ಹೋರಾಟದ ರೂವಾರಿ ಬಿ ಡಿ ಹಿರೇಮಠ ಅವರ ನೇತೃತ್ವದಲ್ಲಿ ಬಂದಿದ್ದ ನಿಯೋಗವನ್ನು ಲೋಕ ಭವನಕ್ಕೆ ಕರೆದೋಯ್ದ ಪ್ರಲ್ಲಾದ ಜೋಶಿಯವರು ರಾಜ್ಯಪಾಲರ ಜೊತೆ ಚರ್ಚೆ ನಡೆಸಿದರು.
ಅಹವಾಲು ಆಲಿಸಿದ ರಾಜ್ಯಪಾಲರು, ಸರ್ಕಾರ ಕಾನೂನು ಅಭಿಪ್ರಾಯ ಬಂದ ನಂತರ ಅಂಕಿತ ಹಾಕುವದಾಗಿ ಹೇಳಿದರು. ಈ ಸಂದರ್ಭದಲ್ಲಿ ಹೋರಾಟಗಾರರ ಜೊತೆ ಮಾತನಾಡಿದ ಪ್ರಲ್ಲಾದ ಜೋಶಿ, ಪ್ರತ್ತೈಕ್ ಪಾಲಿಕೆಗೆ ನನ್ನ ತಕರಾರಿಲ್ಲ ಎಂದು ಸ್ಪಷ್ಟಪಡಿಸಿದರು.
ನಾಳೆ ಕಾಂಗ್ರೇಸ್ಸಿನ ನಾಯಕರೊಂದಿಗೆ ರಾಜ್ಯಪಾಲರನ್ನು ಭೇಟಿ ಮಾಡುವ ಹೋರಾಟಗಾರರ ನಿಯೋಗ, ಸರ್ಕಾರದಿಂದ ಕಾನೂನು ಅಭಿಪ್ರಾಯದ ಬಗ್ಗೆ ಕಾನೂನು ಸಚಿವರ ಜೊತೆ ಚರ್ಚೆ ಮಾಡಲಿದೆ.
ನಾಳೆ ರಾಜ್ಯಪಾಲರ ಜೊತೆ ಸಭೆ ನಡೆಯಲಿದ್ದು, ಈ ಸಂದರ್ಭದಲ್ಲಿ ಕಾನೂನು ಸಚಿವ ಎಚ್ ಕೆ ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಭೈರತಿ ಸುರೇಶ ಭಾಗವಹಿಸಲಿದ್ದಾರೆ.
ಈಗಾಗಲೇ ರಾಜ್ಯ ಕಾಂಗ್ರೇಸ್ ಸರ್ಕಾರ ಪ್ರತ್ತೈಕ್ ಪಾಲಿಕೆ ಬಗ್ಗೆ ಅಧಿಸೂಚನೆ ಹೊರಡಿಸಿದ್ದು, ರಾಜ್ಯಪಾಲರು ಕೇಳಿರುವ ಕಾನೂನು ಅಭಿಪ್ರಾಯ ಹೇಳಬೇಕಿದೆ.
ಇಂದು ರಾಜ್ಯಪಾಲರನ್ನು ಭೇಟಿ ಮಾಡಿದ ನಿಯೋಗದಲ್ಲಿ, ಶಾಸಕ ಅರವಿಂದ ಬೆಲ್ಲದ, ಹೋರಾಟ ಸಮಿತಿಯ ಪ್ರಮುಖರಾದ ಬಿ.ಡಿ. ಹಿರೇಮಠ್, ವಿ.ಡಿ. ಕಾಮರಡ್ಡಿ, ವಿ.ಎ. ಮಚಕನೂರ, ವಿಠ್ಠಲ್ ಕಮ್ಮಾರ, ಸಿ.ಎಸ್. ನೆಗಿನಹಾಳ, ದಾನಪ್ಪ ಕಬ್ಬೇರ, ಗುರುರಾಜ ಹುಣಶಿಮರದ, ಆರ್.ಎಂ. ಶಡಕ್ಷರಯ್ಯ, ಪಿ.ಎ. ಪೋಲಿಸಪಾಟೀಲ, ಶರಣಪ್ಪ ತಲ್ಲೂರ, ಸಚಿನ್ ಕುಲಕರ್ಣಿ, ವಿ.ಎಲ್. ಪಾಟೀಲ, ಬಸವರಾಜ ಪೂಜಾರ, ಸಂತೋಷ ಪಟ್ಟಣಶೆಟ್ಟಿ, ಮಂಜುನಾಥ ಮಡಿವಾಳರ, ಡಾ. ಜೆ.ಎ. ಜಗೀರದಾರ, ವೀರಪ್ಪ ನೆಗಿನಹಾಳ, ನಾಗರಾಜ ಗೌರಿ ಉಪಸ್ಥಿತರಿದ್ದರು.





