Download Our App

Follow us

Home » ಕಾನೂನು » ಧಾರವಾಡ ತಹಸೀಲ್ದಾರ್ ಕಚೇರಿಯಲ್ಲಿ ಅಮಾಯಕರ ಆಸ್ತಿಯನ್ನು ಕೊಳ್ಳೆ ಹೊಡೆಯುವ ಗ್ಯಾಂಗ್. ಡಿಸಿ ಮೇಡಂ ನೋಡಲೇಬೇಕಾದ ಸುದ್ದಿ

ಧಾರವಾಡ ತಹಸೀಲ್ದಾರ್ ಕಚೇರಿಯಲ್ಲಿ ಅಮಾಯಕರ ಆಸ್ತಿಯನ್ನು ಕೊಳ್ಳೆ ಹೊಡೆಯುವ ಗ್ಯಾಂಗ್. ಡಿಸಿ ಮೇಡಂ ನೋಡಲೇಬೇಕಾದ ಸುದ್ದಿ

ಧಾರವಾಡ ಜಿಲ್ಲೆ, ಅನೇಕ ದಕ್ಷ ಜಿಲ್ಲಾಧಿಕಾರಿಗಳನ್ನು ಕಂಡಿದೆ. ಇಲ್ಲಿಗೆ ವರ್ಗವಾಗಿ ಬಂದ ಅದೆಷ್ಟೋ ಜಿಲ್ಲಾಧಿಕಾರಿಗಳು, ಪ್ರಾಮಾಣಿಕ ಸೇವೆಯಿಂದಾಗಿ ಜನರ ಮನಸ್ಸಿನಲ್ಲಿ ಉಳಿದುಕೊಂಡಿದ್ದಾರೆ.

ನಾಲ್ಕು ತಿಂಗಳ ಹಿಂದೆ ಧಾರವಾಡ ಜಿಲ್ಲಾಧಿಕಾರಿಯಾಗಿ ಬಂದ ಸ್ನೇಹಲ್ ರಾಯಮಾನೆ ಅದೇ ಸಾಲಿಗೆ ಸೇರುತ್ತಾರೆ. ಅವರಿಗೆ ಧಾರವಾಡ ಜಿಲ್ಲೆ ಹೊಸದೇನಲ್ಲ. 

ಸ್ನೇಹಲ್ ಮೇಡಂ ಧಾರವಾಡ ಜಿಲ್ಲಾಧಿಕಾರಿಯಾಗಿ ಬಂದ ಎರಡನೇ ದಿನಕ್ಕೆ AC ಕೊಠಡಿಯಲ್ಲಿ ಕುಳಿತುಕೊಳ್ಳದೆ, ಪ್ರತಿ ತಾಲೂಕಿಗೆ ಹೋಗಿ ಜನಸಂಪರ್ಕ ಸಭೆ ಮಾಡಿದ ಹೆಗ್ಗಳಿಕೆ ಹೊಂದಿದ್ದಾರೆ. 

ದಕ್ಷ ಜಿಲ್ಲಾಧಿಕಾರಿಯಾಗಿರುವ ಸ್ನೇಹಲ್ ಮೇಡಂ ಅವರಿಗೆ, ಧಾರವಾಡ ತಹಸೀಲ್ದಾರ್ ಕಚೇರಿಯಲ್ಲಿ ನಡೆಯುತ್ತಿರುವ ಆಕ್ರಮ ಅವ್ಯವಹಾರಗಳ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಕರ್ನಾಟಕ ಫೈಲ್ಸ್ ನೀಡುತ್ತಿದೆ.

ಶ್ರೀಮತಿ, ಸ್ನೇಹಲ್ ಅವರು ಯಾದಗಿರಿ ಜಿಲ್ಲೆಯಲ್ಲಿ ದೊಡ್ಡ ಹೆಸರು ಮಾಡಿ ಬಂದಿದ್ದಾರೆ. ಇವತ್ತಿಗೂ ಅಲ್ಲಿನ ಜನ ಅವರನ್ನು ನೆನಸಿಕೊಳ್ಳುತ್ತಾರೆ. ಆದರೆ ಧಾರವಾಡ ಜಿಲ್ಲೆಯಲ್ಲಿ ಕಂದಾಯ ಇಲಾಖೆಯ ಕೆಲ ಅಧಿಕಾರಿಗಳು ಡಿಸಿ ಮೇಡಂ ಹೆಸರು ಕೆಡಿಸಲು ಹುನ್ನಾರ ನಡೆಸಿದ್ದಾರೆ. 

ಧಾರವಾಡ ಜಿಲ್ಲೆಯ ಆಡಳಿತ ವ್ಯವಸ್ಥೆ, ಹದಗೆಟ್ಟು ಹೋಗಿದೆ. ಎಲ್ಲೆಡೆ ಬ್ರಷ್ಟಾಚಾರ ತಾಂಡವವಾಡುತ್ತಿದೆ. 

ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ, ಆದಿಯಾಗಿ ಅಲ್ಲಿರುವ ಮಾನವಂತ ಅಧಿಕಾರಿ, ಸಿಬ್ಬಂದಿಯಿಂದಾಗಿ, ಡಿಸಿ ಕಚೇರಿಯ ಮರ್ಯಾದೆ, ಗೌರವ ಉಳಿದುಕೊಂಡಿದೆ. 

ಜಿಲ್ಲಾಧಿಕಾರಿ ಕಚೇರಿ ಆವರಣ ದಾಟಿ ಬಂದರೆ ಸಾಕು, ಬಹುತೇಕ ಕಂದಾಯ ಅಧಿಕಾರಿಗಳು, ಜಿಲ್ಲೆಯ ವಾತಾವರಣ ಕೆಡಿಸಿದ್ದಾರೆ. 

ಧಾರವಾಡ ತಹಸೀಲ್ದಾರ್ ಕಚೇರಿಯಲ್ಲಿ ಕೆಲ ಅಧಿಕಾರಿಗಳು, ಸಿಬ್ಬಂದಿಗಳು, ಆಯಾ ಕೆಲಸಕ್ಕೆ ದರ ನಿಗದಿಪಡಿಸಿದ್ದಾರೆ. ಇವರಿಗೆ ಕಾಸು ಕೊಟ್ಟರೆ ಎಂತಹ ಕೆಲಸವನ್ನಾದರು ಮಾಡಲು ಸಿದ್ದ ಎಂಬ ಮಾತಿಗೆ ಕರ್ನಾಟಕ ಫೈಲ್ಸ್ ಸಾಕ್ಷಿ ಒದಗಿಸಲಿದೆ. 

ಜಿಲ್ಲಾಧಿಕಾರಿ, ಸ್ನೇಹಲ್ ರಾಯಮಾನೆಯವರ ಗಮನಕ್ಕೆ ಒಂದಿಷ್ಟು ಮಾಹಿತಿ 

ಧಾರವಾಡದ ದೊಡ್ಡನಾಯಕನಕೊಪ್ಪದ ಸರಹದ್ದಿನಲ್ಲಿರುವ, ಸರ್ವೆ ನಂಬರ 6/2 ರಲ್ಲಿನ 8.8 ಗುಂಟೆ ಬೆಲೆ ಬಾಳುವ ಜಮೀನು ಮೂರು ಜನ ಸಹೋದರರ ಜಂಟಿ ಮಾಲೀಕತ್ವದಲ್ಲಿ ಇತ್ತು. 2024 ರ ವರೆಗೂ ಪಹಣಿಯಲ್ಲಿ ಮೂವರ ಹೆಸರಿತ್ತು.

ಕಿಶೋರ ಹರಿಶ್ಚಂದ್ರ ಹೊನ್ನಾವರ, ಪ್ರೇಮಾನಂದ ಹರಿಶ್ಚಂದ್ರ ಹೊನ್ನಾವರ, ವಸಂತ ಹರಿಶ್ಚಂದ್ರ ಹೊನ್ನಾವರ ಎಂಬುವವರ ಜಂಟಿ ಖಾತೆಯಲ್ಲಿದ್ದ ಜಮೀನಿನ ಪಹಣಿಯಲ್ಲಿ ಏಕಾಏಕಿಯಾಗಿ ಕಿಶೋರ ಹಾಗೂ ಪ್ರೇಮಾನಂದ ಅವರ ಹೆಸರು ಕಡಿಮೆ ಮಾಡಿ, ವಸಂತ ಹೊನ್ನಾವರ ಅವರ ವಾರಸುದಾರರ ಹೆಸರಗೆ ಮಾಡಿರುವ  ಆಘಾತಕಾರಿ ಅಂಶ ತಡವಾಗಿ ಗೊತ್ತಾಗಿದೆ. ಇದನ್ನು ಪರಿಶೀಲಿಸಲು ಹೋದಾಗ, ಧಾರವಾಡ ತಹಸೀಲ್ದಾರ್, ದೊಡ್ಡಪ್ಪಾ ಹೂಗಾರ ಹಾಗೂ ಅವರ ಪಟಾಲಂ, ಲಪಟಾಯಿಸುವಲ್ಲಿ, ಭೂ ಮಾಫಿಯಾದವರಿಗೆ ಸಹಕಾರ ನೀಡಿದೆ ಅನ್ನೋದು ಗೊತ್ತಾಗಿದೆ.

8.8 ಗುಂಟೆ ಜಮೀನಿನಲ್ಲಿ ಮೂವರಿಗೂ ಅಂದರೆ, ಕಿಶೋರ, ಪ್ರೇಮಾನಂದ ಹಾಗೂ ವಸಂತ ಹೊನ್ನಾವರ ಅವರಿಗೆ ಸಮಾನ ಪಾಲು ಬರಬೇಕಿತ್ತು. ಇದು ತಹಸೀಲ್ದಾರ್ ಕಚೇರಿಯಲ್ಲಿನ ಸಿಬ್ಬಂದಿಗೂ ಗೊತ್ತಿತ್ತು.

ಆದರೆ ಕಂದಾಯ ಇಲಾಖೆಯಲ್ಲಿನ ಕೆಲ ಬ್ರಷ್ಟರು, ಕಿಶೋರ ಹಾಗೂ ಪ್ರೇಮಾನಂದ ಹೊನ್ನಾವರ ಅವರಿಗೆ ಯಾರು ಸಹ ವಾರಸುದಾರರು ಇಲ್ಲಾ ಎಂದು ಷರಾ ಬರೆದು, ಜಂಟಿ ಖಾತೆಯಲ್ಲಿನ 8.8 ಗುಂಟೆ ಜಮೀನನ್ನು, ವಸಂತ ಹೊನ್ನಾವರ ಅವರ ಮಗ ಶಶಿಕಾಂತ ಹೊನ್ನಾವರ ಅವರ ಹೆಸರಿಗೆ ಮಾಡಿ ಕಾನೂನು ಬಾಹಿರ ಕೆಲಸ ಮಾಡಿದ್ದಾರೆ. 

ವಸಂತ ಹರಿಶ್ಚಂದ್ರ ಹೊನ್ನಾವರ ಅವರ ಮಗ ಶಶಿಕಾಂತ ವಸಂತ ಹೊನ್ನಾವರ, ಅವರು ಪೋತಿಯಾದ ಬಳಿಕ, ವಾರಸಾ ನಾತೆಯಿಂದ ಪಹಣಿಯಲ್ಲಿ ಶಶಿಕಾಂತನ ಹೆಂಡತಿ ಜ್ಯೋತಿ, ಮಗ ಆಸೀಸ್ ಹಾಗೂ ಮಗಳು ಅರ್ಚನಾ ಸಂಗಮನೇರಕರ ಹೆಸರನ್ನು ಸೇರ್ಪಡೆ ಮಾಡಲಾಗಿತ್ತು. ಯಾರಿಗೂ ಗೊತ್ತಾಗಬಾರದು ಎಂದು, ತಹಸೀಲ್ದಾರ್ ಕಚೇರಿ ಸಿಬ್ಬಂದಿ ಇವೆಲ್ಲ ಬಾನಗಡಿಯನ್ನು ಒಂದೇ ತಿಂಗಳಲ್ಲಿ ಮಾಡಿ ಮುಗಿಸಿದ್ದಾರೆ. 

ತಹಸೀಲ್ದಾರ್ ಕಚೇರಿಯಲ್ಲಿ, ಮೋಸ ಆಗಿದೆ ಎಂದು ತಿಳಿದು, ಧಾರವಾಡಕ್ಕೆ ಬಂದಿದ್ದ, ಕಿಶೋರ ಹೊನ್ನಾವರ ಅವರ ಮಗಳು ಉಷಾ ಮೆನನ್ ಇವರಿಗೆ ತಹಸೀಲ್ದಾರ್ ದೊಡ್ಡಪ್ಪ ಹೂಗಾರ, ಕಾನೂನು ಬಾಹಿರ ಕೆಲಸ ಮಾಡಿ, ನಮ್ಮಿಂದ ಏನು ತಪ್ಪು ಆಗಿಲ್ಲ, ಬೇಕಿದ್ದರೆ ಕೋರ್ಟ್ ಗೆ ಹೋಗಿ ಎಂದು ಬೇಜವಾಬ್ದಾರಿ ಉತ್ತರ ನೀಡಿದ್ದಾರೆ.

ಭೂಮಿಗೆ ಸಂಬಂಧಪಟ್ಟ ಬಹುತೇಕ ಪ್ರಕರಣಗಳಲ್ಲಿ ಹಣ ಪಡೆದು, ಯಾರದೋ ಆಸ್ತಿಯನ್ನು ಯಾರದೋ ಹೆಸರಿಗೆ ಮಾಡುವ ಕೆಲಸ ಇಲ್ಲಿ ಸರಾಗವಾಗಿ ನಡೆಯುತ್ತಿದೆ. ಜೀವಂತ ಇದ್ದವರ ಮರಣ ಪ್ರಮಾಣ ಪತ್ರ,, ನಕಲಿ ವಂಶಾವಳಿ, ನಕಲಿ ಆಧಾರಕಾರ್ಡಗಳು ಇಲ್ಲಿ ತಯಾರಾಗುತ್ತವೆ ಅನ್ನೋದು ನಿಜಕ್ಕೂ ಭಯಬೀಳುವ ಸಂಗತಿಗಳಾಗಿವೆ.

ತಹಸೀಲ್ದಾರ್ ಕಚೇರಿ ರಣಹದ್ದಿನಂತೆ ಕುಳಿತುಕೊಂಡಿರುವ ಕೆಲ ಸಿಬ್ಬಂದಿ ಬ್ರಷ್ಟಾಚಾರದಲ್ಲಿ ಮುಳುಗಿದ್ದು, ಅನೇಕ ವರ್ಷಗಳಿಂದ ಅಲ್ಲಿಯೇ ಬಿಡಾರ ಹೂಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಬಂದಾಗ ಅವರ ಅಪ್ತ ಸಹಾಯಕರ ಜೊತೆ ಕಾಣಿಸಿಕೊಳ್ಳುವ ಕಿರಾತಕರು, ಎಲ್ಲವನ್ನು ದಕ್ಕಿಸಿಕೊಳ್ಳುವ ಹಂತಕ್ಕೆ ಹೋಗಿ ನಿಂತಿದ್ದಾರೆ.

ಅಂತಹವರ ಮೇಲೆ ದಕ್ಷ ಜಿಲ್ಲಾಧಿಕಾರಿ ಎಂದು ಹೆಸರು ಮಾಡಿರುವ ಮತ್ತು ಧಾರವಾಡ ಜಿಲ್ಲೆಯ ಬಗ್ಗೆ ಎಲ್ಲವೂ ಗೊತ್ತಿರುವ ಶ್ರೀಮತಿ, ಸ್ನೇಹಲ್ ಮೇಡಂ ಅವರು ಕಠಿಣ ಕ್ರಮ ಕೈಗೊಳ್ಳಬೇಕಿದೆ. 

ಜಿಲ್ಲಾಧಿಕಾರಿಯವರಿಗೆ ಬೇಕಿದ್ದರೆ, ಕರ್ನಾಟಕ ಫೈಲ್ಸ್ ಎಲ್ಲ ಸಂಬಂದಿತ ಧಾಖಲೆಗಳನ್ನು ಕೊಡಲು ಸಿದ್ದವಿದೆ.

ಎರಡನೇ ಭಾಗದಲ್ಲಿ ತಹಸೀಲ್ದಾರ್ ಕಚೇರಿಯಲ್ಲಿ ನಡೆಯುತ್ತಿರುವ ಕಾನೂನು ಬಾಹಿರ ಕೆಲಸಗಳ ಬಗ್ಗೆ ಕರ್ನಾಟಕ ಫೈಲ್ಸ್ ಧಾಖಲೆ ಸಮೇತ ಸುದ್ದಿ ಪ್ರಕಟ ಮಾಡಲಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ರಾಜ್ಯಸಭೆಗೆ ಕರ್ನಾಟಕದಿಂದ ಕಾಂಗ್ರೇಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ : ಮನ್ಸೂರ್ ಅಲಿ ಖಾನ್ ಗೆ ಟಿಕೇಟ್ ಘೋಷಣೆ

ಕರ್ನಾಟಕದಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಕಾಂಗ್ರೇಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟ ಮಾಡಿದೆ. ಕರ್ನಾಟಕದಿಂದ ಅಖಿಲ ಭಾರತ ಕಾಂಗ್ರೇಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪವನ ಖೇರಾ ಹಾಗೂ

Live Cricket

error: Content is protected !!