Download Our App

Follow us

Home » ಕರ್ನಾಟಕ » ಧಾರವಾಡ : ಹಸುವನ್ನು ‘ರಾಷ್ಟ್ರೀಯ ಪ್ರಾಣಿ’ ಎಂದು ಘೋಷಿಸಲು ಆಗ್ರಹಿಸಿ ನಾಳೆ ಜಿಲ್ಲಾಧಿಕಾರಿಗೆ ಮನವಿ / ಹಿಂದೂಪರ ಸಂಘಟನೆಗಳು ಕೈಜೋಡಿಸಲು ಮನವಿ

ಧಾರವಾಡ : ಹಸುವನ್ನು ‘ರಾಷ್ಟ್ರೀಯ ಪ್ರಾಣಿ’ ಎಂದು ಘೋಷಿಸಲು ಆಗ್ರಹಿಸಿ ನಾಳೆ ಜಿಲ್ಲಾಧಿಕಾರಿಗೆ ಮನವಿ / ಹಿಂದೂಪರ ಸಂಘಟನೆಗಳು ಕೈಜೋಡಿಸಲು ಮನವಿ

ಹಸುವನ್ನು ‘ರಾಷ್ಟ್ರೀಯ ಪ್ರಾಣಿ’ ಎಂದು ಘೋಷಿಸಬೇಕೆಂಬ ಆಗ್ರಹವು ಇತ್ತೀಚೆಗೆ ಹೆಚ್ಚಾಗಿದೆ.

ಇಸ್ಲಾಮಿಕ್ ವಿದ್ವಾಂಸರು ಹಾಗೂ ಜಮೀಯತ್ ಉಲೇಮಾ-ಎ-ಹಿಂದ್‌ನಂತಹ ಮುಸ್ಲಿಂ ಸಂಘಟನೆಗಳು ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಸಲ್ಲಿಸಿವೆ. ದೇಶದಲ್ಲಿ ಹಸುವಿನ ಹೆಸರಿನಲ್ಲಿ ನಡೆಯುತ್ತಿರುವ ಅನಗತ್ಯ ಸಂಘರ್ಷಗಳಿಗೆ ಶಾಶ್ವತ ತೆರೆ ಎಳೆಯಲು ಮತ್ತು ಧಾರ್ಮಿಕ ಸೌಹಾರ್ದತೆ ಕಾಪಾಡಲು ಈ ಕ್ರಮ ಅಗತ್ಯ ಎಂದು ಪ್ರತಿಪಾದಿಸಲಾಗಿದೆ.

ಧಾರವಾಡದಲ್ಲಿಯೂ ಈ ಕೂಗು ಕೇಳಿ ಬಂದಿದ್ದು, ನಾಳೆ ಉತ್ತರ ಕರ್ನಾಟಕ ಅಂಜುಮನ್ ಇಸ್ಲಾಮ್ ಸಂಸ್ಥೆಯವರು ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಿ ಹಾಗೂ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಿದ್ದಾರೆ.

ಬೆಳಿಗ್ಗೆ 11 ಘಂಟೆಗೆ ಧಾರವಾಡ ಜಿಲ್ಲಾಧಿಕಾರಿ ಎದುರು ಸೇರಲಿರುವ ಉತ್ತರ ಕರ್ನಾಟಕ ಅಂಜುಮನ್ ಇಸ್ಲಾಂ ಸಂಸ್ಥೆ ಪಧಾಧಿಕಾರಿಗಳು ಮನವಿ ಸಲ್ಲಿಸಲಿದ್ದಾರೆ.

ಹಿಂದೂ ಸಂಘಟನೆಯವರು ಕೈಜೋಡಿಸಲು ಮನವಿ

ಹಸುವನ್ನು ‘ರಾಷ್ಟ್ರೀಯ ಪ್ರಾಣಿ’ ಎಂದು ಘೋಷಿಸಬೇಕೆಂದು ಆಗ್ರಹಿಸಿ ನಾಳೆ ಉತ್ತರ ಕರ್ನಾಟಕ ಅಂಜುಮನ್ ಇಸ್ಲಾಮ್ ಸಂಸ್ಥೆಯವರು ಮನವಿ ಸಲ್ಲಿಸಲಿದ್ದು,  ಇದರಲ್ಲಿ ಹಿಂದುಪರ ಸಂಘಟನೆಗಳಾದ ರಾಮಸೇನೆ, ವಿಶ್ವ ಹಿಂದೂ ಪರಿಷತ್, ಭಜರಂಗದಳದ ಸ್ನೇಹಿತರು ಭಾಗವಹಿಸಬೇಕೆಂದು ನ್ಯಾಯವಾದಿ ಅಲೀಮ್ ಪಠಾಣ ವಿನಂತಿಸಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ರಾಜ್ಯಸಭೆಗೆ ಕರ್ನಾಟಕದಿಂದ ಕಾಂಗ್ರೇಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ : ಮನ್ಸೂರ್ ಅಲಿ ಖಾನ್ ಗೆ ಟಿಕೇಟ್ ಘೋಷಣೆ

ಕರ್ನಾಟಕದಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಕಾಂಗ್ರೇಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟ ಮಾಡಿದೆ. ಕರ್ನಾಟಕದಿಂದ ಅಖಿಲ ಭಾರತ ಕಾಂಗ್ರೇಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪವನ ಖೇರಾ ಹಾಗೂ

Live Cricket

error: Content is protected !!