ಧಾರವಾಡದ ತಹಸೀಲ್ದಾರ್ ಹಾಗೂ ಉಪವಿಭಾಗಾಧಿಕಾರಿ ಕಚೇರಿಗಳು ಹಣ ಮಾಡುವ ಕೇಂದ್ರಗಳಾಗಿವೆ.
ಧಾರವಾಡ ತಹಸೀಲ್ದಾರ್ ಕಚೇರಿ ಮತ್ತು ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳು ಪ್ರತ್ತೈಕವಾಗಿ ಸಿಂಡಿಕೇಟ್ ರಚನೆ ಮಾಡಿಕೊಂಡಿದ್ದಾರೆ. ಕಡತಗಳ ವಿಲೇವಾರಿ ಇಲ್ಲಿಂದಲೇ ಆಗಬೇಕು.
ಆ ಸಿಂಡಿಕೇಟ್ ಮೂಲಕ ಫೈಲ್ ಗಳು ಬಂದರೆ ಮಾತ್ರ ಕೆಲಸಗಳು ನಿರಾತಂಕವಾಗಿ ನಡೆಯುತ್ತವೆ.
ಇವೆರಡು ಸರ್ಕಾರಿ ಕಚೇರಿಗಳು ಯಾವ ಮಟ್ಟಿಗೆ ಬರಗೆಟ್ಟು ಹೋಗಿವೆ ಎಂದರೆ, ಕಾಸು ಕೊಡದೆ ಇದ್ದರೆ, ಕೆಲಸವೇ ಆಗಲ್ಲ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಆಡಳಿತ ಸುಗಮಗೊಳಿಸಲು E ಆಫೀಸ್ ( ಪೇಪರ ಲೆಸ್ ಕಚೇರಿ ) ಮತ್ತು RRT ಲಾಗಿನ ಅನ್ನು ಜಾರಿಯಲ್ಲಿ ತಂದಿದೆ.
AC ಕಚೇರಿಯಲ್ಲಿ AC ಲಾಗಿನನಲ್ಲಿ ವರ್ಷಗಟ್ಟಲೆ ಕಡತಗಳು ಇನ್ನು ಬಾಕಿ ಇವೆ. E ತಂತ್ರಾಂಶದ ಬಗ್ಗೆ ಜಿಲ್ಲಾಧಿಕಾರಿಗಳು ತಂಡ ರಚನೆ ಮಾಡಿ ಪರಿಶೀಲನೆ ನಡೆಸಬೇಕಾಗಿದೆ. ಅಂದಾಗ ಅಸಲಿಯತ್ತು ಹೊರಬೀಳಲಿದೆ.
ಧಾರವಾಡ, ಅಳ್ನಾವರ ಹಾಗೂ ಕಲಘಟಗಿ ತಾಲೂಕಿನಲ್ಲಿ ಶೇಕಡಾ 60 ರಷ್ಟು ಜಮೀನುಗಳು ಸರ್ಕಾರದಿಂದ ಮಂಜೂರಾದ ಜಮೀನುಗಳಾಗಿವೆ.
ಯಾರಿಗೆ, ಯಾವಾಗ, ಯಾವ ಸಂದರ್ಭದಲ್ಲಿ, ಯಾವ ಮಾನದಂಡ ಅನುಸರಿಸಿ ಭೂಮಿ ಕೊಡಲಾಗಿತ್ತು ಅನ್ನೋದಕ್ಕೆ ಧಾಖಲೆಗಳು ಮಾತನಾಡುತ್ತವೆ.
ಕೆಲವರು ಫಾರ್ಮ್ 7 ಮತ್ತು 7 (A ) ಅಡಿ ಸಲ್ಲಿಸಿ ಮಂಜೂರಾತಿ ಪಡೆದಿರುತ್ತಾರೆ. ಮತ್ತು LGL ಆದೇಶದಡಿ ಸರ್ಕಾರಿ ಭೂಮಿಯನ್ನು ಸಾಗು ಮಾಡಲು ಸರ್ಕಾರದಿಂದ ಮಂಜೂರಾತಿ ಪಡೆದಿರುತ್ತಾರೆ.
ಅಂತಹ ಭೂಮಿಗಳನ್ನು ಕೃಷಿಯೇತರ ಉದ್ದೇಶಕ್ಕಾಗಿ ಬಳಸಬೇಕಾಗಿದ್ದಲ್ಲಿ, ಸಕ್ಷಮ ಪ್ರಾಧಿಕಾರದಿಂದ ( ಡಿಸಿ ) ಪರವಾನಿಗೆ ಪಡೆಯುವದು ಕಡ್ಡಾಯವಾಗಿರುತ್ತದೆ
ಹೀಗೆ ಫಾರ್ಮ ತುಂಬಿ ಜಮೀನುಗಳನ್ನು ಪಡೆದುಕೊಂಡಿದ್ದರೆ, ಇನ್ನು ಕೆಲವು ಜಮೀನುಗಳನ್ನು ಕೊಳ್ಳೆ ಹೊಡೆಯುವ ಉದ್ದೇಶದಿಂದ ನಕಲಿ ಧಾಖಲೆ ಸೃಷ್ಟಿಸಿ, ಭೂಮಿ ಲಪಟಾಯಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಉಳುವವನೇ ಒಡೆಯ ಎಂಬ ಕಾನೂನು ಬಂದ ಮೇಲೆ, ಹೆಚ್ಚುವರಿ ಜಮೀನುಗಳನ್ನು, ಸರ್ಕಾರ 1974-75 ರ ಅವಧಿಯಲ್ಲಿ ಭೂ ರಹಿತರಿಗೆ ಷರತ್ತುಗಳೊಂದಿಗೆ, ಕೃಷಿ ವ್ಯವಸಾಯಕ್ಕೆಂದು ಮಂಜೂರು ಮಾಡಲಾಗಿತ್ತು.
ಹೀಗೆ ಕೆಲವು ಜಮೀನುಗಳು “ಬ” ಖರಾಬ್ ಜಮೀನು ಆಗಿದ್ದರೆ, ಇನ್ನು ಕೆಲವು ಜಮೀನುಗಳನ್ನು, ಅದಕ್ಕೂ ಮುಂಚೆ ಇನಾಮ್ ರೂಪದಲ್ಲಿ ಕೊಡಲಾಗಿತ್ತು.
ಕಂದಾಯ ಇಲಾಖೆಯ ಕಾಯ್ದೆಗನುಗುಣವಾಗಿ, ಮಂಜೂರಾದ ಭೂಮಿಗಳನ್ನು ಸುಳ್ಳು ಧಾಖಲೆ ಸೃಷ್ಟಿಸಿ, ಪಹಣಿಯಲ್ಲಿ ಉಳಿದುಕೊಂಡಿದ್ದ “ಸರ್ಕಾರ ” ಎಂದು ನಮೂದಾಗಿರುವನ್ನು ರದ್ದು ಮಾಡಿ, ಸರ್ಕಾರಕ್ಕೆ ಮೋಸ ಮಾಡಲಾಗಿದೆ.
ಧಾರವಾಡ ತಹಸೀಲ್ದಾರ್ ಕಚೇರಿಯಲ್ಲಿ ತಿಮಿಂಗಲುಗಳು ಬಿಡಾರ ಹೂಡಿದ್ದು, ಜಿಲ್ಲೆಯ ಮಾನ ಹರಾಜು ಹಾಕಿದ್ದಾರೆ.
ನೂರು ಏಕರೆ ಜಮೀನಿನ ಜೊತೆ ಸರ್ವೆ ನಂಬರ 319, 105, 6/1 ಸೇರಿದಂತೆ ಹಲವು ಭೂಮಿಗಳನ್ನು ಸ್ವಾಹಾ ಮಾಡಲಾಗಿದೆ.
ತಹಸೀಲ್ದಾರ್ ಹಾಗೂ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಭಯಾನಕ ತಂಡವೊಂದು ಇದ್ದು, ಧಾರವಾಡದಲ್ಲಿ ಆಸ್ತಿ ಮಾಡಿದವರು ಎಚ್ಚರದಿಂದಿರಬೇಕಿದೆ.
ಮೇಲಿಂದ ಮೇಲೆ ಪಹಣಿ ಮತ್ತು ಸಂಬಂದಿತ ಧಾಖಲೆಗಳನ್ನು ನೋಡಿ, ಆಸ್ತಿ ನಿಮ್ಮ ಹೆಸರಿಗೆ ಇದೆಯೋ ಇಲ್ಲವೋ ಅನ್ನೋದನ್ನ ಪರಿಶೀಲಿಸಬೇಕಿದೆ.
ಧಾರವಾಡ ಮೊದಲಿನಂತೆ ಉಳಿದಿಲ್ಲ. ಧಾರವಾಡ ಭಾರಿ ಬದಲಾಗಿದೆ. ಕೆಲ ಅಧಿಕಾರಿಗಳು ಭೂ ಮಾಫಿಯಾದವರ ಜೊತೆ ಶಾಮೀಲಾಗಿದ್ದಾರೆ. ಏಜೆಂಟ್ ರನ್ನು ಸಾಕಿಕೊಂಡಿದ್ದಾರೆ.
ಕರ್ನಾಟಕ ಫೈಲ್ಸ್, ಧಾರವಾಡ ತಹಸೀಲ್ದಾರ್ ಮತ್ತು ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ನಡೆಯುತ್ತಿರುವ ಬ್ರಹ್ಮಾಂಡ ಬ್ರಷ್ಟಾಚಾರವನ್ನು ಒಂದೊಂದಾಗಿ ಬಯಲಿಗೆ ತರಲಿದೆ.





