ಸುವರ್ಣ ನ್ಯೂಸ್ ನಲ್ಲಿ, ತಡಸಿನಕೊಪ್ಪ ಸರಹದ್ದಿನಲ್ಲಿರುವ ನೂರು ಏಕರೆ ಭೂಮಿಯಲ್ಲಿ ಆರೋಪ ಕೇಳಿ ಬಂದಿದ್ದರ ನಡುವೆಯೇ ಧಾರವಾಡ ತಹಸೀಲ್ದಾರ್ ದೊಡ್ಡಪ್ಪ ಹೂಗಾರರನ್ನು ಸರ್ಕಾರ ಸ್ಥಳ ಸೂಚಿಸದೆ ವರ್ಗ ಮಾಡಿದೆ.
ಇಂದು ಒಟ್ಟು 27 ಜನ ತಹಸೀಲ್ದಾರರನ್ನು ವರ್ಗಾವಣೆ ಮಾಡಲಾಗಿದ್ದು, ಹೂಗಾರರ ಜಾಗೆಗೆ ಸಚ್ಚಿದಾನಂದ ಕುಚನೂರರನ್ನು ವರ್ಗ ಮಾಡಿದೆ.

ದೊಡ್ಡಪ್ಪ ಹೂಗಾರ, ಸುವರ್ಣ ನ್ಯೂಸ್ ನಲ್ಲಿ ವರದಿ ಪ್ರಸಾರವಾಗುತ್ತಿದ್ದಂತೆ ಬೇರೆ ಕಡೆ ವರ್ಗ ಮಾಡಿಸಿಕೊಳ್ಳಲು ತಯಾರಿ ನಡೆಸಿದ್ದರ ಬಗ್ಗೆ ಕರ್ನಾಟಕ ಫೈಲ್ಸ್ ವರದಿ ಮಾಡಿತ್ತು.
ಅಲ್ಲದೇ ನೂರು ಏಕರೆ ಭೂಮಿಗೆ ಸಂಬಂದಿಸಿದಂತೆ ಜಿಲ್ಲಾಧಿಕಾರಿಗಳು, ಪ್ರಕರಣದ ತನಿಖೆಗೆ ಅಪರ ಜಿಲ್ಲಾಧಿಕಾರಿ ಸಿ ಡಿ ಗೀತಾ ಅವರ ನೇತೃತ್ವದಲ್ಲಿ ಸಮಿತಿ ನೇಮಕ ಮಾಡಿದ್ದರು.
ಗೀತಾ ಅವರ ತನಿಖಾ ವರದಿ ಬರುವ ಮುಂಚೆಯೇ ಧಾರವಾಡ ತಹಸೀಲ್ದಾರ ಆಗಿದ್ದ ದೂಡ್ಡಪ್ಪ ಹೂಗಾರ ವರ್ಗವಾಗಿದ್ದು, ಜಿಲ್ಲೆಯಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದು ಸಾಬೀತಾಗಿದೆ.
ಮತ್ತೊಂದು ಪ್ರಕರಣದಲ್ಲಿ, ಸರ್ವೇ ನಂಬರ 6/2 ಪೈಕಿ 8.8 ಗುಂಟೆ ಜಮೀನಿಗೆ ಸಂಬಂಧಪಟ್ಟಂತೆ, ಧಾರವಾಡ ತಹಸೀಲ್ದಾರ್ ಕಚೇರಿಯಲ್ಲಿ ಆಕ್ರಮ ನಡೆದಿದೆ ಎಂದು ಆರೋಪಿಸಿ, ಅಕ್ಟೋಬರ್ 23, 2025 ರಂದು ಉಪನಗರ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ಧಾಖಲಾಗಿತ್ತು
ಇದೆಲ್ಲದರ ಮಧ್ಯೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ರ ಅಪ್ತ ಸಹಾಯಕರನ್ನು ಭೇಟಿಯಾಗಿ ಅಳ್ನಾವರ ತಹಸೀಲ್ದಾರ್ ಆಗಲು ದುಂಬಾಲು ಬಿದ್ದಿದ್ದರು ಎನ್ನಲಾಗಿದೆ.




