Download Our App

Follow us

Home » ರಾಜಕೀಯ » ಡಿ ಕೆ ಸರ್ಕಾರ ಆಸ್ತಿತ್ವಕ್ಕೆ ಬರುತ್ತಿದ್ದಂತೆ, ಮುಸ್ಲಿಮ್ ಸಮಾಜದ ಪ್ರಾತಿನಿದ್ಯಕ್ಕೆ ಕೊಕ್ಕೆ : ಮುಸ್ಲಿಮ್ ವೋಟ್ ಮಾತ್ರ ಬೇಕು, ಅಧಿಕಾರ ಕೊಡೋದಿಲ್ಲ.

ಡಿ ಕೆ ಸರ್ಕಾರ ಆಸ್ತಿತ್ವಕ್ಕೆ ಬರುತ್ತಿದ್ದಂತೆ, ಮುಸ್ಲಿಮ್ ಸಮಾಜದ ಪ್ರಾತಿನಿದ್ಯಕ್ಕೆ ಕೊಕ್ಕೆ : ಮುಸ್ಲಿಮ್ ವೋಟ್ ಮಾತ್ರ ಬೇಕು, ಅಧಿಕಾರ ಕೊಡೋದಿಲ್ಲ.  

ಕರ್ನಾಟಕ ವಿಧಾನ ಪರಿಷತ್‌ನ 7 ಸದಸ್ಯರ ಅವಧಿ ಜೂನ್ 30ಕ್ಕೆ ಮುಗಿಯುವುದರಿಂದ, ಆ ಸ್ಥಾನಗಳಿಗೆ ಜೂನ್ 18 ರಂದು ದ್ವೈವಾರ್ಷಿಕ ಚುನಾವಣೆ ನಡೆಯಲಿದೆ.

ಕಾಂಗ್ರೇಸ್ ಪಕ್ಷ ನಾಲ್ಕು ಸ್ಥಾನಗಳಲ್ಲಿ ಗೆಲ್ಲಬಹುದಾಗಿದ್ದು, ನಾಲ್ಕು ಸ್ಥಾನಗಳಿಗೆ ಕಾಂಗ್ರೇಸ್ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ.

ತೆರವಾಗುವ ಸ್ಥಾನಗಳು 

ವಿಧಾನ ಪರಿಷತ್ತಿನ ಪ್ರಸ್ತುತ ಸದಸ್ಯರಾದ ಗೋವಿಂದ ರಾಜು, ನಸೀರ್ ಅಹ್ಮದ್, ತಿಪ್ಪಣ್ಣ, ಬಿ.ಕೆ. ಹರಿಪ್ರಸಾದ್, ಎನ್. ನಾಗರಾಜು (ಎಂಟಿಬಿ), ಪ್ರತಾಪ್ ಸಿಂಹ ನಾಯಕ್ ಮತ್ತು ಸುನೀಲ್ ವಲ್ಯಾಪುರ ಅವರ ಅವಧಿ ಕೊನೆಗೊಳ್ಳುತ್ತಿದೆ.

ಜೂನ್ 18 ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಜೂನ್ 1 ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಜೂನ್ 8 ಕೊನೆಯ ದಿನವಾಗಿದೆ.

ರಾಜ್ಯ ವಿಧಾನಸಭೆಯ (MLA) ಸದಸ್ಯರು ಮತ ಚಲಾಯಿಸಬೇಕಾಗಿದೆ. 

ಇದೀಗ ನಿವೃತ್ತಿಗೊಳ್ಳಲಿರುವ ಮತ್ತು ಕಾಂಗ್ರೇಸ್ ಪಕ್ಷದಿಂದ ಶಿಸ್ತು ಕ್ರಮ ಎದುರಿಸುತ್ತಿರುವ ನಸೀರ್ ಅಹ್ಮದ ಬದಲು, ಮತ್ತೊಬ್ಬ ಮುಸ್ಲಿಮ್ ನಾಯಕರಿಗೆ ಅವಕಾಶ ಮಾಡಿಕೊಡಬೇಕಾಗಿತ್ತು.

ಆದರೆ ಇದೀಗ ತೆರವಾಗಲಿರುವ ನಾಲ್ಕು ಸ್ಥಾನಗಳಿಗೆ ಕಾಂಗ್ರೇಸ್ ಪಕ್ಷ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದು, ಕಾಂಗ್ರೇಸ್ಸಿನಿಂದ, ಬಿ ಕೆ ಹರಿಪ್ರಸಾದ, ತಿಪ್ಪಣ್ಣಪ್ಪ ಕಮಕನೂರು, ಪಿ ವಿ ಮೋಹನ ಹಾಗೂ ಶಿವಣ್ಣ ಮಳವಳ್ಳಿಯವರಿಗೆ ಅವಕಾಶ ನೀಡಲಾಗಿದೆ. 

ಈ ಪೈಕಿ ಬಿ ಕೆ ಹರಿಪ್ರಸಾದ ಹಾಗೂ ತಿಪ್ಪಣ್ಣಪ್ಪ ಅವರಿಗೆ ಮತ್ತೆ ವಿಧಾನ ಪರಿಷತ್ ಸದಸ್ಯರಾಗುವ ಭಾಗ್ಯ ಸಿಕ್ಕಿದೆ.

ಇದರಿಂದಾಗಿ ಡಿ ಕೆ ಸರ್ಕಾರ ಆಸ್ತಿತ್ವಕ್ಕೆ ಬರುತ್ತಿದ್ದಂತೆ, ಮುಸ್ಲಿಮ್ ಸಮಾಜದ ಪ್ರಾತಿನಿದ್ಯಕ್ಕೆ ಕೊಕ್ಕೆ ಬಿದ್ದಂತಾಗಿದೆ. ಮುಸ್ಲಿಮ್ ಸಮಾಜದ ವೋಟುಗಳು ಮಾತ್ರ ಕಾಂಗ್ರೇಸ್ಸಿಗೆ ಬೇಕಾಗಿದ್ದು, ಆವರನ್ನು ರಾಜಕೀಯ ಅಧಿಕಾರದಿಂದ ವಂಚಿತರನ್ನಾಗಿ ಮಾಡುತ್ತಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ರಾಜ್ಯಸಭೆಗೆ ಕರ್ನಾಟಕದಿಂದ ಕಾಂಗ್ರೇಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ : ಮನ್ಸೂರ್ ಅಲಿ ಖಾನ್ ಗೆ ಟಿಕೇಟ್ ಘೋಷಣೆ

ಕರ್ನಾಟಕದಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಕಾಂಗ್ರೇಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟ ಮಾಡಿದೆ. ಕರ್ನಾಟಕದಿಂದ ಅಖಿಲ ಭಾರತ ಕಾಂಗ್ರೇಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪವನ ಖೇರಾ ಹಾಗೂ

Live Cricket

error: Content is protected !!