ರೈತ ಬಂಡಾಯದ ನಾಡು ನವಲಗುಂದ ಈಗ ಆಕ್ರಮ ಸಾರಾಯಿ ಮಾರಾಟಕ್ಕೆ ಪ್ರಸಿದ್ದಿ ಪಡೆದಿದೆ.
ರಾಜ್ಯದಲ್ಲಿ 24 ಘಂಟೆಗಳ ಕಾಲ ಸಾರಾಯಿ ಮಾರಾಟವಾಗುವ ಏಕೈಕ ಕ್ಷೇತ್ರವೆಂದರೆ ಅದು ನವಲಗುಂದ ನಗರ ಅನ್ನೋ ಮಟ್ಟಿಗೆ ಈ ನಗರ ಪ್ರಸಿದ್ದಿ ಪಡೆದಿದೆ.
ಇಲ್ಲಿನ ಬಹುತೇಕ ಯುವಕರು, ಮದ್ಯ ವಯಸ್ಕರು ಕುಡಿತದ ಚಟಕ್ಕೆ ಬಲಿಯಾಗುತ್ತಿದ್ದಾರೆ.
ಸಾರಾಯಿ ಅಂಗಡಿಗಳಲ್ಲಿ ಮಾತ್ರ ಮಾರಾಟವಾಗುತ್ತಿಲ್ಲ, ಮನೆಗಳಲ್ಲಿ ಸಹ ರಾಜಾರೋಷವಾಗಿ ಆಕ್ರಮ ಸಾರಾಯಿ ಮಾರಾಟ ಮಾಡಲಾಗುತ್ತಿದೆ ಎನ್ನಲಾಗಿದೆ.
ಒಂದು ಕಾಲಕ್ಕೆ ಹುಬ್ಬಳ್ಳಿಯ ಕಮರಿಪೇಟೆಯ ಆಕ್ರಮ ಸಾರಾಯಿಗೆ ಹೆಸರಾಗಿತ್ತು. ಇದೀಗ ನವಲಗುಂದ ಆ ಸಾಲಿಗೆ ಸೇರಿಕೊಂಡಿದೆ.
ಕಣ್ಮುಚ್ಚಿ ಕುಳಿತ ಅಬಕಾರಿ ಇಲಾಖೆ ಹಾಗೂ ಪೊಲೀಸರು
ನವಲಗುಂದದಲ್ಲಿ ಇಷ್ಟೆಲ್ಲಾ ಓಪನ್ ಆಗಿ ಸಾರಾಯಿ ಮಾರಾಟವಾಗುತ್ತಿದ್ದರು, ಅಬಕಾರಿ ಇಲಾಖೆ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ. ಇನ್ನು ಪೊಲೀಸರು ಆಕ್ರಮವಾಗಿ ಸಾರಾಯಿ ಮಾರಾಟ ಮಾಡುವವರನ್ನು ಹಿಡಿಯುತ್ತಿಲ್ಲ ಎನ್ನಲಾಗಿದೆ.
ನವಲಗುಂದದಿಂದ, ಕ್ಷೇತ್ರದ ಪ್ರತಿ ಹಳ್ಳಿಗೂ ಆಕ್ರಮ ಸಾರಾಯಿ ರವಾನೆ
ನವಲಗುಂದ ತಾಲೂಕಿನ ಪ್ರತಿಯೊಂದು ಹಳ್ಳಿಗಳಲ್ಲಿ ಇದೀಗ ಸರಾಯಿ ಸುಲಭವಾಗಿ ದೊರೆಯುತ್ತದೆ. ದ್ವಿಚಕ್ರ ವಾಹನದ ಮೇಲೆ ಬಾಕ್ಸ್ ಹೇರಿಕೊಂಡು ಹೋಗುವ ಏಜೆಂಟ್ ಗಳು ಹಳ್ಳಿಗಳಿಗೆ ಸಾರಾಯಿ ತಲುಪಿಸುವ ಕಾಯಕದಲ್ಲಿ ತೊಡಗಿದ್ದಾರೆ
ಐ ಜಿ ಪಿ ಗೆ ದೂರು
ನವಲಗುಂದದಲ್ಲಿ ಆಕ್ರಮ ಸಾರಾಯಿ ಮಾರಾಟದಿಂದಾಗಿ ನಮ್ಮ ಮನೆಯ ಗಂಡಸರು ಹಾಳಾಗುತ್ತಿದ್ದು, ಈ ಕುರಿತು ಬೆಳಗಾವಿಯಲ್ಲಿರುವ ಐ ಜಿ ಪಿ ಗೆ ದೂರು ನೀಡಲು ಮಹಿಳೆಯರು ಮುಂದಾಗಿದ್ದಾರೆ.




