ಬಿಜೆಪಿ ಶಾಸಕನ ಅಳಿಯನೊಬ್ಬ ನಕಲಿ ಗುರುತಿನ ಕಾರ್ಡ್ ಮಾಡಿಸಿ ಇದುವರೆಗೆ 25 ಮಹಿಳೆಯರ ಜೊತೆ ಮದುವೆಯಾದ ಘಟನೆ ಬೆಳಕಿಗೆ ಬಂದಿದೆ.
ಉತ್ತರ ಪ್ರದೇಶದ ಬಿಜೆಪಿ ಶಾಸಕ ಜ್ಞಾನ್ ತಿವಾರಿ ಅವರ ಮಗಳನ್ನು ಮದುವೆಯಾಗಲು ನಕಲಿ ಗುರುತಿನ ಚೀಟಿ ಬಳಸಿದ ಆರೋಪದ ಮೇಲೆ ಪ್ರಖರ್ ತ್ರಿವೇದಿ ಮತ್ತು ಅವರ ತಂದೆಯನ್ನು ಬಂಧಿಸಲಾಗಿದೆ.
ಪ್ರಖರ್ ಈ ಹಿಂದೆ 25 ಮಹಿಳೆಯರನ್ನು ವಂಚಿಸಿ ಮದುವೆಯಾಗಿದ್ದಾರೆ ಎಂದು ಶಾಸಕರು ಆಗಸ್ಟ್ 6 ರಂದು ಆರೋಪಿಸಿದ್ದರು.
ಇಲ್ಲಿ ಸ್ವತಃ ಶಾಸಕರೇ ಯಾಮಾರಿದ್ದು, ಮಗಳನ್ನು, ಪ್ರಖರ ತಿವಾರಿ ಎಂಬುವನ ಜೊತೆ ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು.
ಬಿಜೆಪಿ ಶಾಸಕ ಜ್ಞಾನ ತಿವಾರಿ ಇದೀಗ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ವಂಚಕ ಅಳಿಯನನ್ನು ಬಂಧಿಸಲಾಗಿದೆ.
ಉತ್ತರ ಪ್ರದೇಶದ ರೆಯುಸಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Author: Karnataka Files
Post Views: 363





