ಬೇರೆ ಬೇರೆ ಪ್ರಕರಣದಲ್ಲಿ ಸೇವೆಯಿಂದ ಅಮಾನತುಗೊಂಡಿದ್ದ ಇನ್ಸಪೆಕ್ಟರಗಳಾದ ರಫೀಕ್ ತಹಸೀಲ್ದಾರ್ ಹಾಗೂ ಶಿವಯೋಗಿ ಲೋಹಾರ ಮತ್ತೆ ಕರ್ತವ್ಯಕ್ಕೆ ಮರಳಿದ್ದಾರೆ.
ಧಾರವಾಡ ವಿದ್ಯಾಗಿರಿ ಠಾಣೆ ಇನ್ಸಪೆಕ್ಟರ್ ಆಗಿದ್ದ ವೇಳೆ ಗಾಂಜಾ ಪ್ರಕರಣದಲ್ಲಿ ರಫೀಕ್ ತಹಸೀಲ್ದಾರ್ ರನ್ನು ಸಿಲುಕಿಸಿ ಅವರನ್ನು ಅಮಾನತು ಮಾಡಲಾಗಿತ್ತು. ಅವರ ಅಮಾನತು KTIಆದೇಶ ಹಿಂಪಡೆದು ಅವರನ್ನು ಈಗ ಗರಗ ಪೊಲೀಸ್ ಠಾಣೆಗೆ ಇನ್ಸಪೆಕ್ಟರ್ ಆಗಿ ಸ್ಥಳ ನಿಯುಕ್ತಿ ಮಾಡಲಾಗಿದೆ.
ಗರಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಲವ್ ಜಿಹಾದ್ ಪ್ರಕರಣದಲ್ಲಿ ಸಸ್ಪೆಂಡ್ ಆಗಿದ್ದ ಶಿವಯೋಗಿ ಲೋಹಾರ ಇದೀಗ ವಿದ್ಯಾಗಿರಿ ಪೊಲೀಸ್ ಠಾಣೆ ಇನ್ಸಪೆಕ್ಟರ್ ಹುದ್ದೆಗೆ ನಿಯುಕ್ತಿ ಮಾಡಲಾಗಿದೆ..
Author: Karnataka Files
Post Views: 1,904




