Download Our App

Follow us

Home » ಕಾನೂನು » ಧಾರವಾಡ : ರಾಜ್ಯದಲ್ಲಿಯೇ ಅತೀ ದೊಡ್ಡ ಲೋಕಾ ದಾಳಿ : 50 ಲಕ್ಷ ಪಡೆಯುವಾಗ ಬಲೆಗೆ ಬಿದ್ದ ತಹಸೀಲ್ದಾರ್ ಸಚ್ಚಿದಾನಂದ

ಧಾರವಾಡ : ರಾಜ್ಯದಲ್ಲಿಯೇ ಅತೀ ದೊಡ್ಡ ಲೋಕಾ ದಾಳಿ : 50 ಲಕ್ಷ ಪಡೆಯುವಾಗ ಬಲೆಗೆ ಬಿದ್ದ ತಹಸೀಲ್ದಾರ್ ಸಚ್ಚಿದಾನಂದ

ಧಾರವಾಡದ ಕರ್ನಾಟಕ ಕಾಲೇಜಿನ ಆವರಣದಲ್ಲಿ ಲೋಕಾಯುಕ್ತರು ಭರ್ಜರಿ ಭೇಟೆಯಾಡಿದ್ದಾರೆ.

ರಾಜ್ಯದಲ್ಲಿಯೇ ಅತಿದೊಡ್ಡ ಲೋಕಾಯುಕ್ತ ದಾಳಿ ಇದಾಗಿದ್ದು, ಜಮೀನು ವಿಷಯಕ್ಕೆ ಸಂಬಂಧಿಸಿದಂತೆ ಧಾಖಲೆ ತಿದ್ದುಪಡಿ ಮಾಡಲು ಧಾರವಾಡ ತಹಸೀಲ್ದಾರ್ ಸಚ್ಚಿದಾನಂದ ಕುಚನೂರು 50 ಲಕ್ಷ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಯರೆಕೊಪ್ಪ ಗ್ರಾಮದ 33 ಎಕರೆ ಭೂಮಿಯ ಪೈಕಿ 13 ಎಕರೆ ಭೂಮಿಖರಾಬ್ ಇತ್ತು. ಇದನ್ನು ಸರಿಪಡಿಸಲು ಧಾರವಾಡ ತಹಸೀಲ್ದಾರ್ ಸಚ್ಚಿದಾನಂದ ಕುಚನೂರು 50 ಲಕ್ಷ ಹಣ ಹಾಗೂ ಎರಡು ಎಕರೆ ಭೂಮಿ ಕೊಡುವಂತೆ ಬೇಡಿಕೆ ಇಟ್ಟಿದ್ದರು.

ದೂರುದಾರ ಇಂದು ಹಣ ಕೊಡಲು ಲೋಕಾಯುಕ್ತರ ಜೊತೆ ಬಂದಿದ್ದರು. ತಹಸೀಲ್ದಾರ್ ಹಣ ಪಡೆಯುತ್ತಿದ್ದಂತೆ ದಾಳಿ ಮಾಡಿದ ಲೋಕಾಯುಕ್ತರು ಸಚ್ಚಿದಾನಂದರನ್ನು ಬಂಧಿಸಿದ್ದಾರೆ.

 

ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪಾ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಡಿಎಸ್ಪಿ ರವೀಂದ್ರ ಕುರುಬಗಟ್ಟಿ, ಇನ್ಸಪೆಕ್ಟರ್ ಪ್ರಸಾದ, ಕರುಣೇಶಗೌಡ, ಪ್ರಸಾದ ಪಾನೇಕರ ದಾಳಿ ಮಾಡಲಾಗಿದೆ.

 

ಇದು ರಾಜ್ಯದಲ್ಲಿಯೇ ಅತೀದೊಡ್ಡ ಲೋಕಾಯುಕ್ತ ದಾಳಿಯಾಗಿದೆ.

ದುರ್ದೈವ ಎಂದರೆ, ಕೆಸಿಡಿ ಕಾಲೇಜಿಗೆ ರಾಜ್ಯದ ಮೂಲೆ ಮೂಲೆಗಳಿಂದ ವಿದ್ಯಾರ್ಥಿಗಳು ಬಂದು ಭವಿಷ್ಯ ರೂಪಿಸಿಕೊಳ್ಳುತ್ತಾರೆ. ಆದರೆ ಧಾರವಾಡ ತಹಸೀಲ್ದಾರ್ ಸಚ್ಚಿದಾನಂದ ಕುಚನೂರು ಲಂಚ ಪಡೆಯಲು ಕಾಲೇಜಿನ ಆವರಣಕ್ಕೆ ಬಂದಿದ್ದು ವಿಪರ್ಯಾಸ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ : ಲೋಕಾ ಬಲೆಗೆ ಬಿದ್ದ ತಹಸೀಲ್ದಾರ್ ಸಚ್ಚಿದಾನಂದ ಇಂದು ಸತ್ಯ ನಾರಾಯಣ ಪೂಜೆ ಇಟ್ಟುಕೊಂಡಿದ್ದ : ಗಣಪಣ ಶಾಪ !

ಜಮೀನು ಧಾಖಲೆ ಸರಿಪಡಿಸಿಕೊಡುವ ವಿಷಯಕ್ಕೆ ಸಂಬಂಧಿಸಿದಂತೆ 50 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತರ ಬಲೆಗೆ ಬಿದ್ದ ಧಾರವಾಡ ತಹಸೀಲ್ದಾರ್ ಸಚ್ಚಿದಾನಂದ, ಕಚೇರಿಯಲ್ಲಿ ಸತ್ಯನಾರಾಯಣ ಪೂಜೆ ಇಟ್ಟುಕೊಂಡಿದ್ದ. ಪೂಜೆಯ

Live Cricket

error: Content is protected !!