Download Our App

Follow us

Home » ಕಾನೂನು » ಧಾರವಾಡ : ಲೋಕಾ ಬಲೆಗೆ ಬಿದ್ದ ತಹಸೀಲ್ದಾರ್ ಸಚ್ಚಿದಾನಂದ ಇಂದು ಸತ್ಯ ನಾರಾಯಣ ಪೂಜೆ ಇಟ್ಟುಕೊಂಡಿದ್ದ : ಗಣಪಣ ಶಾಪ !

ಧಾರವಾಡ : ಲೋಕಾ ಬಲೆಗೆ ಬಿದ್ದ ತಹಸೀಲ್ದಾರ್ ಸಚ್ಚಿದಾನಂದ ಇಂದು ಸತ್ಯ ನಾರಾಯಣ ಪೂಜೆ ಇಟ್ಟುಕೊಂಡಿದ್ದ : ಗಣಪಣ ಶಾಪ !

ಜಮೀನು ಧಾಖಲೆ ಸರಿಪಡಿಸಿಕೊಡುವ ವಿಷಯಕ್ಕೆ ಸಂಬಂಧಿಸಿದಂತೆ 50 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತರ ಬಲೆಗೆ ಬಿದ್ದ ಧಾರವಾಡ ತಹಸೀಲ್ದಾರ್ ಸಚ್ಚಿದಾನಂದ, ಕಚೇರಿಯಲ್ಲಿ ಸತ್ಯನಾರಾಯಣ ಪೂಜೆ ಇಟ್ಟುಕೊಂಡಿದ್ದ.

ಪೂಜೆಯ ಜೊತೆಗೆ ಸಾವಿರಾರು ಜನರಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ಸಹ ಆಯೋಜಿಸಲಾಗಿತ್ತು.

ಅನ್ನ ಸಂತರ್ಪಣೆಗಾಗಿ ಕಚೇರಿಯಲ್ಲಿ ಭರದ ಸಿದ್ಧತೆ ನಡೆದಿತ್ತು. ರಾತ್ರಿಯೇ ಅಡುಗೆ ಮಾಡಲು ಬಟ್ಟರು ಬಂದಿದ್ದರು. ಸುಮಾರು ಎರಡು ಸಾವಿರ ಜನರಿಗೆ ಅಡುಗೆ ಸಿದ್ದವಾಗಿತ್ತು.

ಗಣಪಣ ಎದುರು ಸತ್ಯನಾರಾಯಣ ಪೂಜೆ ಮಾಡಬೇಕಿದ್ದ ಸಚ್ಚಿದಾನಂದನನ್ನು ಲೋಕಾಯುಕ್ತರು ರಾತ್ರಿಯೇ ಲಾಕ್ ಮಾಡಿದ್ದರು. ಸತ್ಯ ಎನೆಂಬುದು ರಾತ್ರಿಯೇ ಗೊತ್ತಾಗಿತ್ತು.

ಫಾರ್ಚುನರ ಕಾರಲ್ಲಿ ಕುಳಿತು 50 ಲಕ್ಷ ಲಂಚದ ಹಣ ಎಣೆಸುವ ಸಂದರ್ಭದಲ್ಲಿ ಧಾರವಾಡ ತಹಸೀಲ್ದಾರ್ ಸಿಕ್ಕುಬಿದ್ದಿದ್ದ.

ಬಹುಷಃ ವಿಜ್ಞ ವಿನಾಶಕ ಗಣಪಣನಿಗೂ ಇಂತಹ ಲಂಚದ ಹಣದಲ್ಲಿ ಅದ್ದೂರಿ ಪೂಜೆ ಮಾಡಿಸಿಕೊಳ್ಳಲು ಇಷ್ಟವಿರಲಿಲ್ಲ ಅನ್ಸುತ್ತೆ. ಕಡೆಗೂ ಗಣಪ ಶಾಪ ಕೊಟ್ಟ ಎಂಬಂತಹ ಮಾತುಗಳು ಕೇಳಿ ಬಂದವು

ಧಾರವಾಡದ ತಹಸೀಲ್ದಾರ್ ಕಚೇರಿಯಲ್ಲಿ, ಅಡುಗೆ ತಯಾರಾಗುತ್ತಿದೆ, ಸತ್ಯ ನಾರಾಯಣ ಪೂಜೆ ನಡೆಯಬೇಕಿದೆ. ಆದರೆ ತಹಸೀಲ್ದಾರ್ ಸಚ್ಚಿದಾನಂದ ಕೃಷ್ಣನ ಜನ್ಮಸ್ಥಾನ ಸೇರಿದ್ದಾನೆ.

ಧಾರವಾಡ ತಹಸೀಲ್ದಾರ್ ಕಚೇರಿ ಬ್ರಷ್ಟಾಚಾರದ ಕೇಂದ್ರವಾಗಿದೆ ಎಂದು ಕರ್ನಾಟಕ ಫೈಲ್ಸ್ಹಿಂದೆಯೇ ಸುದ್ದಿ ಮಾಡಿತ್ತು. ಅಲ್ಲಿ ಇನ್ನು ಅನೇಕ ಬ್ರಷ್ಟರು ಇದ್ದಾರೆ. ಅವರನ್ನು ಅಲ್ಲಿಂದ ಎತ್ತಂಗಡಿ ಮಾಡದೆ ಇದ್ದಲ್ಲಿ ಮತ್ತಷ್ಟು ಇಂತಹ ದಾಳಿಗಳು ಮುಂದುವರೆಯಲಿವೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ : ಲೋಕಾ ಬಲೆಗೆ ಬಿದ್ದ ತಹಸೀಲ್ದಾರ್ ಸಚ್ಚಿದಾನಂದ ಇಂದು ಸತ್ಯ ನಾರಾಯಣ ಪೂಜೆ ಇಟ್ಟುಕೊಂಡಿದ್ದ : ಗಣಪಣ ಶಾಪ !

ಜಮೀನು ಧಾಖಲೆ ಸರಿಪಡಿಸಿಕೊಡುವ ವಿಷಯಕ್ಕೆ ಸಂಬಂಧಿಸಿದಂತೆ 50 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತರ ಬಲೆಗೆ ಬಿದ್ದ ಧಾರವಾಡ ತಹಸೀಲ್ದಾರ್ ಸಚ್ಚಿದಾನಂದ, ಕಚೇರಿಯಲ್ಲಿ ಸತ್ಯನಾರಾಯಣ ಪೂಜೆ ಇಟ್ಟುಕೊಂಡಿದ್ದ. ಪೂಜೆಯ

Live Cricket

error: Content is protected !!