ಡಾ.ಆನಂದ ಪಾಂಡುರಂಗಿ ನಾಡು ಕಂಡ ಅಪ್ರತಿಮ ಮನೋವೈದ್ಯ. ಹೆಸರಿನಂತೆ ಬದುಕಿ ಲಕ್ಷಾಂತರ ಜನರ ಉಸಿರಾದ ಮಹಾನ್ ಚೇತನ್.
ಹೃದಯಾಘಾತದಿಂದ ಸಾವನ್ನಪ್ಪಿದ ಧೀಮಂತ ವೈಧ್ಯನಿಗೆ, ಸರ್ಕಾರ, ಸರ್ಕಾರಿ ಗೌರವ ನೀಡುವ ಮೂಲಕ ವಿದಾಯ ಹೇಳಿತು.
ಜನ್ಮತಃ ಬ್ರಾಹ್ಮಣ ಸಮುದಾಯದಲ್ಲಿ ಹುಟ್ಟಿದ ಡಾ.ಆನಂದ ಪಾಂಡುರಂಗಿಯವರು ಎಲ್ಲರನ್ನು ಸಮಾನವಾಗಿ ಕಂಡವರು.
ಶರಣರನ್ನು ಮರಣದಲ್ಲಿ ಕಾಣು ಎಂಬಂತೆ ಇಂದು ಅವರ ಅಂತಿಮ ದರ್ಶನ ಪಡೆದವರು, ಪವಿತ್ರ ಪಾರ್ಥಿವ ಶರೀರ ಕಂಡು ಬಿಕ್ಕಿ ಬಿಕ್ಕಿ ಅತ್ತರು.
ಜಾತ್ಯತೀತ ವ್ಯಕ್ತಿತ್ವ ಹೊಂದಿದ್ದ ಡಾ. ಆನಂದ ಪಾಂಡುರಂಗಿಯವರು ನೀಡಿದ ವೈದ್ಯಕೀಯ ಸೇವೆ ಅಪ್ರತಿಮ ಮತ್ತು ಅದ್ಭುತ.
ಪ್ರಖ್ಯಾತ ಮನೋವೈದ್ಯರಾಗಿದ್ದ ಅವರು ಸಾವಿರಾರು ಜನರಿಗೆ ಉಚಿತ ಚಿಕಿತ್ಸೆ ನೀಡಿ ಕಳಿಸುತ್ತಿದ್ದರು. ಅವರು ಬದುಕಿದ್ದಷ್ಟು ದಿನ ಹಣದ ಮೋಹದ ಹಿಂದೆ ಬೀಳದೆ ಇರುವದು, ಮಾದರಿಯಾಗಿದೆ.
ಅಂತಹ ಪುಣ್ಯಾತ್ಮನನ್ನು ಕೊಟ್ಟಂತ ಧಾರವಾಡ ಇಂದು ಅಗಲಿದ ಡಾ. ಆನಂದ ಪಾಂಡುರಂಗಿಯವರ ಅಗಲಿಕೆಗೆ ಕಂಬನಿ ಮಿಡಿಯಿತು.
ಸರ್ಕಾರ ಅಗಲಿದ ಚೇತನಕ್ಕೆ ಸರ್ಕಾರಿ ಗೌರವ ಕೊಡಬೇಕು ಎಂದು ಮುಖ್ಯಮಂತ್ರಿಗಳಿಗೆ ಆಗ್ರಹಿಸಿದ್ದ ಕೇಂದ್ರ ಜೋಶಿಯವರ ಮಾತಿಗೆ ಬೆಲೆ ಕೊಟ್ಟ ಸರ್ಕಾರ, ಸರ್ಕಾರಿ ಗೌರವ ನೀಡಿದೆ.

ಅಗಲಿದ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ ಎಂದು ಕರ್ನಾಟಕ ಫೈಲ್ಸ್. ಕಾಮ್ ಪ್ರಾರ್ಥಿಸುತ್ತದೆ.
ಮತ್ತೆ ಹುಟ್ಟಿ ಬನ್ನಿ ಡಾಕ್ಟರ್ 🙏





