ಕಬ್ಬು ಬೆಳೆಗೆ ಬೆಂಬಲ ಬೆಲೆ ನೀಡಲು ಆಗ್ರಹಿಸಿ ಕಬ್ಬು ಬೆಳೆಗಾರರು ಧಾರವಾಡದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
ಕಬ್ಬು ಬೆಳೆಗಾರರು ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಏಕಕಾಲಕ್ಕೆ ಪ್ರತಿಭಟನೆ ನಡೆಸಿದ್ದು, ಧಾರವಾಡದ ಜುಬಿಲಿ ಸರ್ಕಲ್ ಸಂಪೂರ್ಣ ಬಂದ್ ಮಾಡಿದ್ದಾರೆ.
ಪ್ರತಿಭಟನಾ ನಿರತರು ಕೇವಲ ಆಂಬುಲೆನ್ಸ್ ಗೆ ಮಾತ್ರ ದಾರಿ ಮಾಡಿಕೊಟ್ಟಿದ್ದು, ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಬಿರು ಬಿಸಿಲಿನಲ್ಲಿ ಸುಡುವ ರಸ್ತೆಯಲ್ಲಿ ಕುಳಿತು ಕೊಂಡಿರುವ ರೈತರ ಆಕ್ರೋಶ ಮುಗಿಲು ಮುಟ್ಟಿದೆ.
ಸಧ್ಯ ಪ್ರತಿ ಟನ್ ಕಬ್ಬಿಗೆ 3200 ರೂಪಾಯಿ ಕೊಡುತ್ತಿದ್ದಾರೆ. ಅದನ್ನು ಕನಿಷ್ಟ 5500 ರೂಪಾಯಿ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಬರಗಾಲ ಬಿದ್ದಿದ್ದು, ಅನ್ನದಾತ ಕಷ್ಟದಲ್ಲಿದ್ದಾನೆ. ಕೂಡಲೇ ಸರ್ಕಾರ ಪ್ರತಿ ಹೆಕ್ಟರಗೆ 50 ಸಾವಿರ ನೀಡಬೇಕೆಂದು ಆಗ್ರಹಿಸಿದ್ದಾರೆ.
ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬಂದು ನಮ್ಮ ಅಹವಾಲು ಕೇಳಬೇಕೆಂದು ರೈತರು ಪಟ್ಟು ಹಿಡಿದಿದ್ದಾರೆ.
Author: Karnataka Files
Views: 399





