ಎಮ್ ಎಸ್ ಪಿ ಹೆಚ್ಚಳ, ಡಾ, ಸ್ವಾಮಿನಾಥನ ವರದಿ ಅನುಷ್ಟಾನ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಹುಬ್ಬಳ್ಳಿಯತ್ತ ಬರುತ್ತಿರುವ ರೈತರ ಪಾದಯಾತ್ರೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಇಂದು ಸಂಜೆ 5 ಘಂಟೆ ಸುಮಾರಿಗೆ ಪಾದಯಾತ್ರೆ ಕಿತ್ತೂರ ತಲುಪಲಿದ್ದು, ಮುಖ್ಯಮಂತ್ರಿ ಡಿ ಕೆ ಶಿವಕುಮಾರ ರೈತರನ್ನು ಭೇಟಿ ಮಾಡಲಿದ್ದಾರೆ.
ಈಗಾಗಲೇ ಪ್ರತಿಭಟನೆ ಕೈಬಿಡುವಂತೆ ಮುಖ್ಯಮಂತ್ರಿಗಳು ಮಾಡಿದ ಮನವಿಯನ್ನು ತಿರಸ್ಕರಿಸಿರುವ ರೈತ ಮುಖಂಡರು ಪಾದಯಾತ್ರೆ ಮುಂದುವರೆಸಿದ್ದಾರೆ.
ಇಂದು ಸಂಜೆ ಬೆಳಗಾವಿಗೆ ವಿಶೇಷ ವಿಮಾನದಲ್ಲಿ ಬರಲಿರುವ ಮುಖ್ಯಮಂತ್ರಿಗಳು ರೈತರ ಜೊತೆ ಚರ್ಚಿಸಿ ಅವರ ಮನವೊಲಿಸಲಿದ್ದಾರೆ.
ಈಗಾಗಲೇ ಮೂರು ಲಕ್ಷಕ್ಕೂ ಹೆಚ್ಚು ಜನ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕುತ್ತಿದ್ದು, ಸಂಜೆ ವೇಳೆಗೆ ಕಿತ್ತೂರಿನಲ್ಲಿ 5 ಲಕ್ಷ ರೈತರು ಜಮಾವಣೆ ಆಗಲಿದ್ದಾರೆ ಎಂದು ಮುಖಂಡ ಚೂನಪ್ಪಾ ತಿಳಿಸಿದ್ದಾರೆ..
Author: Karnataka Files
Views: 646




