Download Our App

Follow us

Home » ಭಾರತ » ರಾಜ್ಯ ಬಿಜೆಪಿ ಮುಳುಗುತ್ತಿರುವ ಹಡಗು. ಧೈರ್ಯ ಇದ್ದರೆ ಆಪರೇಷನ್ ಕಮಲ ಮಾಡಲಿ -ಬಿ ಎಲ್ ಸಂತೋಷಗೆ ಶೆಟ್ಟರ ಸವಾಲ್

ರಾಜ್ಯ ಬಿಜೆಪಿ ಮುಳುಗುತ್ತಿರುವ ಹಡಗು. ಧೈರ್ಯ ಇದ್ದರೆ ಆಪರೇಷನ್ ಕಮಲ ಮಾಡಲಿ -ಬಿ ಎಲ್ ಸಂತೋಷಗೆ ಶೆಟ್ಟರ ಸವಾಲ್

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಮತ್ತೆ ಬಿಜೆಪಿಯ ವರಿಷ್ಟ ಬಿ ಎಲ್ ಸಂತೋಷ ಮೇಲೆ ವಾಗ್ದಾಳಿ ನಡೆಸಿದ್ದಾರೆ.

45 ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ, ಹೈಕಮಾಂಡ ಸಿಗ್ನೇಲ್ ಕೊಟ್ಟರೆ ಒಂದು ದಿನದ ಕೆಲಸ ಎಂದು ನಿನ್ನೇ ಬೆಂಗಳೂರಿನಲ್ಲಿ ಬಿಜೆಪಿ ಸಭೆಯಲ್ಲಿ ಮಾತನಾಡಿದ ಬಿ ಎಲ್ ಸಂತೋಷಗೆ ಜಗದೀಶ ಶೆಟ್ಟರ ಸವಾಲ್ ಹಾಕಿದ್ದಾರೆ. ಧೈರ್ಯ ಇದ್ದರೆ ಆಪರೇಷನ್ ಕಮಲ ಮಾಡಿ ಎಂದು ಸವಾಲು ಹಾಕಿದ್ದಾರೆ. ಆಪರೇಷನ್ ಮಾಡಿಯೆ ಸರ್ಕಾರ ಮಾಡುವ ಬಿಜೆಪಿ ಒಂದು ಸಲವು ಪೂರ್ಣ ಬಹುಮತದೊಂದಿಗೆ ಬಂದಿಲ್ಲ ಎಂದು ಆರೋಪಿಸಿದ್ದಾರೆ. ರಾಜ್ಯ ಬಿಜೆಪಿ ಮುಳುಗುಟ್ಟಿರುವ ಹಡಗು ಎಂದ ಶೆಟ್ಟರ, ಬಿ ಎಲ್ ಸಂತೋಷ ಮೊದಲು ಬಿಜೆಪಿಯಲ್ಲಿರುವ ಶಾಸಕರನ್ನು ಕಾಪಾಡಲಿ ಎಂದಿದ್ದಾರೆ. ಕೆಲವೇ ಕೆಲವು ಜನರನ್ನು ಕೈಯಲ್ಲಿ ಸಿಕ್ಕ ಪರಿಣಾಮ ಬಿಜೆಪಿ ಅಧೋಗತಿಗೆ ಇಳಿದಿದೆ ಎಂದು ಕಿಡಿಕಾರಿದರು. ಬಿ ಎಲ್ ಸಂತೋಷ ಬಗ್ಗೆ ಬಿಜೆಪಿಯ ದೆಹಲಿ ವರಿಷ್ಠರು ಯೋಚನೆ ಮಾಡಬೇಕು ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಆಪರೇಷನ್ ಒತ್ತಟ್ಟಿಗಿರಲಿ, ಬಿಜೆಪಿಗೆ ಆಸ್ತಿತ್ವ ಉಳಿಸಿಕೊಳ್ಳುವದು ಆಗುತ್ತಿಲ್ಲ ಎಂದು ಹೇಳಿದರು. ಕಾಂಗ್ರೇಸ್ ಶಾಸಕರು ಸಂಪರ್ಕದಲ್ಲಿದ್ದಾರೆಂದು ಹೇಳಿ, ಬಿಜೆಪಿ ಆಸ್ತಿತ್ವ ಉಳಿಸಿಕೊಳ್ಳೋಕೆ ಪ್ರಯತ್ನ ಮಾಡುತ್ತಿದ್ದಾರೆ ಎಂದು ಜಗದೀಶ ಶೆಟ್ಟರ ತಿಳಿಸಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ನವಲಗುಂದ ನರಗುಂದ ರೈತ ಬಂಡಾಯಕ್ಕೆ 46 ವರ್ಷ ಪೂರ್ಣ : ರೈತರ ಪಾದಕ್ಕೆ ಶರಣಾಗಿದ್ದ ಕಾಂಗ್ರೇಸ್ ಸರ್ಕಾರ : ಅಂದು ನಡೆದಿದ್ದು ಏನು? ಇಲ್ಲಿದೆ ಡಿಟೇಲ್ ಸ್ಟೋರಿ

ನವಲಗುಂದ ನರಗುಂದ ರೈತ ಬಂಡಾಯ ನಡೆದು ಇವತ್ತಿಗೆ 46 ವರ್ಷಗಳು ಪೂರ್ಣಗೊಂಡಿವೆ. ಪ್ರತಿ ವರ್ಷ ಜುಲೈ 21 ರಂದು ರೈತರು, ಈ ದಿನವನ್ನು ರೈತ ಹುತಾತ್ಮ ದಿನಾಚರಣೆ

Live Cricket

error: Content is protected !!