ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡಿದ್ದು, ಇಬ್ಬರು ಅಸಹಾಯಕರು ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಲೇವಡಿ ಮಾಡಿದ್ದಾರೆ.
ಹಾವು ಮುಂಗುಸಿಯಂತೆ ಇದ್ದ ಜೆಡಿಎಸ್ ಹಾಗೂ ಬಿಜೆಪಿಯವರ ಮೈತ್ರಿ ಎರಡು ಪಕ್ಷಗಳು ವೀಕ್ ಆಗಿದೆ ಎಂಬುದನ್ನು ತೋರಿಸುತ್ತದೆ ಎಂದು ವ್ಯಂಗ್ಯವಾಡಿದ್ದಾರೆ. ಲೋಕಸಭಾ ಚುನಾವಣೆ ಹೊತ್ತಿಗೆ ರಾಜ್ಯದಲ್ಲಿ ಪಕ್ಷಾಂತರ ಪರ್ವ ಹೆಚ್ಚಾಗಲಿದ್ದು, ಬಿಜೆಪಿಯಲ್ಲಿರುವ ನಾಯಕರು ಬೇಜಾರಾಗಿ, ಹೊರ ಬರಲಿದ್ದಾರೆ ಎಂದರು. ಸಾಕಷ್ಟು ಜನ ನನ್ನ ಸಂಪರ್ಕದಲ್ಲಿದ್ದು, ಬಿಜೆಪಿಗೆ ಹೆದರಿಕೆ ಶುರುವಾಗಿದೆ ಎಂದರು
Author: Karnataka Files
Post Views: 2





