Download Our App

Follow us

Home » ರಾಜಕೀಯ » ಸುಳ್ಳು ಸುದ್ದಿ ಆರೋಪ ಬೆಂಗಳೂರಿನಲ್ಲಿ ಆಜ್ ತಕ್ ಸುದ್ದಿ ವಾಹಿನಿ ಮೇಲೆ ಎಫ್ ಐ ಆರ್ ಧಾಖಲು. FIR ಸಮೇತ ಸುದ್ದಿ

ಸುಳ್ಳು ಸುದ್ದಿ ಆರೋಪ ಬೆಂಗಳೂರಿನಲ್ಲಿ ಆಜ್ ತಕ್ ಸುದ್ದಿ ವಾಹಿನಿ ಮೇಲೆ ಎಫ್ ಐ ಆರ್ ಧಾಖಲು. FIR ಸಮೇತ ಸುದ್ದಿ

ಹಿಂದಿ ಭಾಷೆಯ ಹೆಸರಾಂತ ಸುದ್ದಿ ವಾಹಿನಿ, ಆಜ್ ತಕ್ ವಾಹಿನಿಯ ಸುದ್ದಿ ನಿರೂಪಕ ಸೇರಿದಂತೆ ಸಂಸ್ಥೆಯ ಮೇಲೆ ಬೆಂಗಳೂರಿನ ಶೇಷಾದ್ರಿಪುರಂ ಠಾಣೆಯಲ್ಲಿ ದೂರು ಧಾಖಲಾಗಿದೆ.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಯೋಜನೆಗಳ ಬಗ್ಗೆ ಸುಳ್ಳು ಸುದ್ದಿ ಬಿತ್ತರಿಸಿ, ದ್ವೇಷ ಬೆಳೆಸುವಂತಹ ಹಾಗೂ ಕೋಮು ಸಾಮರಸ್ಯ ಕದಡುವ ಆರೋಪದ ಮೇಲೆ ಎಫ್ ಐ ಆರ್ ಧಾಖಲಾಗಿದೆ. 11-09-2023 ರ ರಾತ್ರಿ 09-55 ರ ಸುಮಾರಿಗೆ ಪ್ರಸಾರವಾದ ಕಾರ್ಯಕ್ರಮದಲ್ಲಿ, ಕರ್ನಾಟಕ ಸರ್ಕಾರ ಅಲ್ಪಸಂಖ್ಯಾತರ ತುಷ್ಟಿಕರಣ ಮಾಡುತ್ತಿದೆ. ಇದರಿಂದಾಗಿ ಅಲ್ಪಸಂಖ್ಯಾತರಲ್ಲದ ಹಿಂದೂಗಳಿಗೆ ಅನ್ಯಾಯವಾಗುತ್ತಿದೆ ಎಂದು ಸುದ್ದಿ ಮಾಡಿತ್ತು.

ಹಿಂದೂಗಳಿಗೆ ಮೂರು ಲಕ್ಷ ಸಬ್ಸಿಡಿ ಕೊಡದೆ ಕೇವಲ ಮುಸ್ಲಿಂರಿಗೆ ಕೊಡಲಾಗುತ್ತಿದೆ ಎಂದು ಆರೋಪಿಸಿ ಆಜ್ ತಕ್ ನಿರೂಪಕ ಸುಧೀರ ಚೌದರಿ ಹೇಳಿದ್ದರು.ಆಜ್ ತಕ್ ವಾಹಿನಿ ಈ ರೀತಿ ಸುಳ್ಳು ಸುದ್ದಿ ಹರಡಿ, ಸಮಾಜದ ನೆಮ್ಮದಿ ಕದಡುವದನ್ನು ಗಂಭೀರವಾಗಿ ತೆಗೆದುಕೊಂಡಿದ್ದ ಸರ್ಕಾರ ದೂರು ಧಾಖಲಿಸಿದೆ. ಕರ್ನಾಟಕ ಅಲ್ಪಸಂಖ್ಯಾತರ ನಿಗಮದ ಶಿವಕುಮಾರ ಎಸ್ ಎಂಬ ಅಧಿಕಾರಿ ಶೇಷಾದ್ರಿಪುರಂ ಠಾಣೆಯಲ್ಲಿ ನಿರೂಪಕ ಸುಧೀರ ಚೌದರಿ ಹಾಗೂ ಸುದ್ದಿ ಸಂಸ್ಥೆ ಮೇಲೆ ದೂರು ಧಾಖಲಿಸಿದ್ದಾರೆ.

ದೂರು ಆಧರಿಸಿ ಶೇಷಾದ್ರಿಪುರಂ ಪೊಲೀಸರು IPC 1860 ಸೆಕ್ಷನ್ 505, 153A ಅಡಿ ಪ್ರಕರಣ ಧಾಖಲಿಸಿಕೊಂಡಿದ್ದಾರೆ. ಸುಧೀರ ಚೌದರಿ A 1 ಆರೋಪಿಯಾಗಿದ್ದು, ಒಟ್ಟು ಮೂವರ ಮೇಲೆ ದೂರು ಧಾಖಲಾಗಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ರಾಜ್ಯದಲ್ಲಿ ಭಯ ಹುಟ್ಟಿಸುತ್ತಿರುವ ಹೆಣ್ಣುಮಕ್ಕಳ ನಾಪತ್ತೆ ಪ್ರಕರಣ

ಕರ್ನಾಟಕದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಹೆಣ್ಣುಮಕ್ಕಳ ನಾಪತ್ತೆ ಪ್ರಕರಣಗಳು ಭಯ ಹುಟ್ಟಿಸಿವೆ.  ಕರ್ನಾಟಕದಲ್ಲಿ ಕಳೆದ ಆರು ವರ್ಷಗಳ ಅವಧಿಯಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಹೆಣ್ಣುಮಕ್ಕಳು ನಾಪತ್ತೆಯಾಗಿದ್ದಾರೆ.  ಇತ್ತೀಚಿನ

Live Cricket

error: Content is protected !!