ರಾಜ್ಯ ಕಾಂಗ್ರೇಸ ಸರ್ಕಾರದ ಅತ್ಯಂತ ಸರಳ ಹಾಗೂ ಪಾರದರ್ಶಕ ಸಚಿವ ಎಂದು ಕರೆಸಿಕೊಳ್ಳುವ ಕಂದಾಯ ಸಚಿವ ಕೃಷ್ಣ ಭೈರೇಗೌಡರು ಇಂದು ಗ್ರೌಂಡ ರಿಯಾಲಿಟಿ ನಡೆಸಿದರು. ಇಲಾಖೆಯ ಪ್ರಗತಿ ಪರಿಶೀಲನೆಗೆಂದು ಧಾರವಾಡ ಜಿಲ್ಲೆಯ ಪ್ರವಾಸದಲ್ಲಿರುವ ಕಂದಾಯ ಸಚಿವರು ಕಲಘಟಗಿ ತಾಲೂಕಿನ ದುಮ್ಮವಾಡ ಗ್ರಾಮಡ ನಾಡ ಕಚೇರಿಗೆ ದಿಡೀರ ಭೇಟಿ ನೀಡಿದರು.
ನಾಡ ಕಛೇರಿಯ ಕಾರ್ಯ ವೈಖರಿ ಬಗ್ಗೆ ಮಾಹಿತಿ ಪಡೆದ ಕೃಷ್ಣ ಭೈರೇಗೌಡರು, ಅಧಿಕಾರಿಗಳು ಜನಸ್ನೇಹಿ ಸೇವೆ ನೀಡುವಂತೆ ಸೂಚಿಸಿದರು. ಸರ್ಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವಂತೆ ಕರೆ ನೀಡಿದರು. ಸಚಿವರಿಗೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಸಾಥ ನೀಡಿದರು. ಕಂದಾಯ ಸಚಿವ ಕೃಷ್ಣ ಭೈರೇಗೌಡ, ಇಂದು ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ.
Author: Karnataka Files
Post Views: 2





