ಕಿತ್ತೂರಿನ ತಿಗಡೊಳ್ಳಿ ಗ್ರಾಮದಲ್ಲಿ ರೌಡಿಯೂಬ್ಬನ ಭೀಕರ ಕೊಲೆಯಾಗಿದೆ. ರೌಡಿ ಶೀಟರ್ ವಿಜಯ ರಾಮಪ್ಪ ಆರೇರ್ ಎಂಬುವನನ್ನು ಕೊಚ್ಚಿ ಕೊಲೆ ಮಾಡಲಾಗಿದೆ.

ಕೊಲೆಯಾದ ವಿಜಯ, ನಿನ್ನೇ ಗ್ರಾಮ ಪಂಚಾಯತಿ ಸದಸ್ಯ ಕಲ್ಲಪ್ಪ ಕ್ಯಾತಣ್ಣವರ ಮೇಲೆ ತಲವಾರನಿಂದ ಹಲ್ಲೆ ಮಾಡಿದ್ದ ಎನ್ನಲಾಗಿದೆ.

ವಿಜಯನ ತಲವಾರಿನ ಏಟಿಗೆ ತಪ್ಪಿಸಿಕೊಂಡು ಹೋಗಿದ್ದ ಕಲ್ಲಪ್ಪ, ಭರತ ಹಿತ್ತಲಕೇರಿ ಜೊತೆ ಸೇರಿ ರೌಡಿ ವಿಜಯನನ್ನು ಭೀಕರವಾಗಿ ಕೊಲೆ ಮಾಡಿದ್ದಾರೆ.

ಪ್ರಕರಣ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಧಾಖಲಾಗಿದ್ದು. ಘಟನೆಯಲ್ಲಿ ಕಲ್ಲಪ್ಪ ಹಾಗೂ ಭರತಗೂ ಗಂಭೀರ ಗಾಯವಾಗಿದೆ.
Author: Karnataka Files
Post Views: 2





