ಮೂರು ದಿನಗಳ ಕಾಲ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಪ್ರತಿಷ್ಟಾಪನೆಗೊಂಡಿದ್ದ ಗಣೇಶನ ವಿಸರ್ಜನೆ ಇಂದು ನಡೆಯಿತು. ವಿಸರ್ಜನಾ ಕಾರ್ಯಕ್ರಮದಲ್ಲಿ ವಿಜಯಪೂರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ, ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಎಮ್ ಆರ್ ಪಾಟೀಲ ಭಾಗವಹಿಸಿದ್ದರು. ಈದ್ಗಾ ಮೈದಾನದಿಂದ ಹೊರಟ ಗಣೇಶನ ಮೆರವಣಿಗೆ ಹೊಸೂರನಲ್ಲಿರುವ ಪಾಲಿಕೆಯ ಭಾವಿ ವರೆಗೆ ನಡೆಯಿತು. ಮೆರವಣಿಗೆಯಲ್ಲಿ 5 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ವಿಸರ್ಜನೆಗೂ ಮುನ್ನ ಬಸನಗೌಡ ಪಾಟೀಲ್ ಯತ್ನಾಳ ಮಾತು ಹಿಂದೂ ಕಾರ್ಯಕರ್ತರನ್ನು ಹುರಿದುಂಬಿಸಿತು. ಭಕ್ತರ ಕರಡಾತನದ ಮಧ್ಯೆ ಈದ್ಗಾ ಗಣೇಶನನ್ನು ಅದ್ದೂರಿಯಾಗಿ ಬೀಳ್ಕೊಡಲಾಯಿತು. ಮೆರವಣಿಗೆಯುದ್ದಕ್ಕೂ ಬಿಗಿ ಪೊಲೀಸ್ ಬಂದೂಬಸ್ತ ಮಾಡಲಾಗಿತ್ತು.
Author: Karnataka Files
Post Views: 2





