ಹುಬ್ಬಳ್ಳಿಯ ಈದ್ಘಾ ಮೈದಾನದಲ್ಲಿ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಕೋಮು ಸಾಮರಸ್ಯಕ್ಕೆ ಧಕ್ಕೆ ಬರುವ ರೀತಿಯಲ್ಲಿ ಪ್ರಮೋದ ಮುತಾಲಿಕ ಹೇಳಿಕೆ ನೀಡಿದ್ದಾರೆ. ಧಾರ್ಮಿಕ ಭಾವನೆಗೆ ಧಕ್ಕೆ ಬರುವ ರೀತಿಯಲ್ಲಿ ಹೇಳಿಕೆ ನೀಡಿದ ಪ್ರಮೋದ ಮುತಾಲಿಕರನ್ನು ಗಡಿ ಪಾರು ಮಾಡಬೇಕೆಂದು ಪೊಲೀಸ್ ಆಯುಕ್ತರಿಗೆ ಮನವಿ ಮಾಡಲಾಗಿದೆ. ಅಷ್ಪಾಕ ಕುಮಟಾಕರ ಮತ್ತಿತರರು ಪೊಲೀಸ್ ಆಯುಕ್ತರಿಗೆ ಮನವಿ ನೀಡಿದರು. ಹುಬ್ಬಳ್ಳಿ ಮಹಾನಗರ ನೆಮ್ಮದಿಯಿಂದ ಇದೆ. ಎಲ್ಲ ವರ್ಗದ ಜನ ಸಹಬಾಳ್ವೆಯಿಂದ ಇದ್ದಾರೆ. ಇಂತದರಲ್ಲಿ ಪ್ರಮೋದ ಮುತಾಲಿಕ ಹೇಳಿಕೆ ನೋವು ತರಿಸಿದೆ ಎಂದು ತಿಳಿಸಿದ್ದಾರೆ.
Author: Karnataka Files
Post Views: 2





