Download Our App

Follow us

Home » ಕಾನೂನು » ಕರ್ತವ್ಯದ ಮಧ್ಯೆಯೂ ಸಾಮಾಜಿಕ ಕಳಕಳಿ ಮೆರೆದ ಪೊಲೀಸ್. PWD ಅಧಿಕಾರಿಗಳೇ ನಿಮಗೆ ನಾಚಿಕೆಯಾಗ್ಬೇಕು.

ಕರ್ತವ್ಯದ ಮಧ್ಯೆಯೂ ಸಾಮಾಜಿಕ ಕಳಕಳಿ ಮೆರೆದ ಪೊಲೀಸ್. PWD ಅಧಿಕಾರಿಗಳೇ ನಿಮಗೆ ನಾಚಿಕೆಯಾಗ್ಬೇಕು.

ಧಾರವಾಡದ ಸಂಚಾರಿ ಪೊಲೀಸ್ ಒಬ್ಬರು, ಕರ್ತವ್ಯದ ಮಧ್ಯೆಯೂ ಸಾಮಾಜಿಕ ಕಳಕಳಿ ಮೆರೆದು, ಜನರಿಂದ ಮೆಚ್ಚುಗೆ ಗಳಿಸಿದ್ದಾರೆ. ಧಾರವಾಡದ 

ಜ್ಯುಬಿಲಿ ಸರ್ಕಲ್ ನಲ್ಲಿ ಕಳೆದ ಕೆಲವು ತಿಂಗಳಿನಿಂದ ದೊಡ್ಡ ತೆಗ್ಗು ಗುಂಡಿ ಬಿದ್ದಿತ್ತು. ಸುಗಮ ವಾಹನ ಸಂಚಾರಕ್ಕೆ ತೆಗ್ಗು ಗುಂಡಿ ತೊಂದರೆ ಕೊಟ್ಟಿತ್ತು. ಕೆಲ ದ್ವಿಚಕ್ರ ವಾಹನ ಸವಾರರು, ತೆಗ್ಗು ಗುಂಡಿ ತಪ್ಪಿಸಲು ಕೈ ಕಾಲು ಮುರಿದುಕೊಂಡಿದ್ದರು. ಲೋಕೋಪಯೋಗಿ ಇಲಾಖೆಯವರು ರಸ್ತೆ ಸರಿಪಡಿಸುತ್ತಾರೆ ಎಂದು ಕಾದು ಕುಳಿತರು, ಅಧಿಕಾರಿಗಳು ಮಾತ್ರ ತಿರುಗಿ ನೋಡಲೇ ಇಲ್ಲ. ರಸ್ತೇ ಗುಂಡಿಯಿಂದಾಗಿ ಮೇಲಿಂದ ಮೇಲೆ ಅಪಘಾತವಾಗುತ್ತಿರುವದನ್ನು ಗಮನಿಸಿದ ಸಂಚಾರಿ ಪೊಲೀಸ ಕಲ್ಮೇಶ್ವರ ಹಿರೇಮಠ, ತಾವೇ ಸ್ವತಃಹ ನಿಂತು ತೆಗ್ಗು ಗುಂಡಿಯನ್ನು ಮುಚ್ಚಿದ್ದಾರೆ.

ಧಾರವಾಡದ ಪ್ರಮುಖ ಸರ್ಕಲ್ ಆಗಿದೆ. ಇಲ್ಲಿ ನಿತ್ಯ ಲಕ್ಷಾಂತರ ವಾಹನಗಳು ಓಡಾಡುತ್ತವೆ. ಪ್ರಮುಖ ಸರ್ಕಲನಲ್ಲಿ ತೆಗ್ಗು ಗುಂಡಿ ಮುಚ್ಚುವ ಮೂಲಕ ಕಲ್ಮೇಶ್ವರ ಹಿರೇಮಠ, ಇಲಾಖೆಗೆ ಹೆಸರು ತಂದುಕೊಟ್ಟಿದ್ದಾರೆ. ಸಂಚಾರಿ ಪೊಲೀಸ್ ಪೇದೆ ಕಲ್ಮೇಶ್ವರ ಕೆಲಸಕ್ಕೆ ಸಾರ್ವಜನಿಕರು ಶ್ಲಾಘಿಸಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ರಾಜ್ಯಸಭೆಗೆ ಕರ್ನಾಟಕದಿಂದ ಕಾಂಗ್ರೇಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ : ಮನ್ಸೂರ್ ಅಲಿ ಖಾನ್ ಗೆ ಟಿಕೇಟ್ ಘೋಷಣೆ

ಕರ್ನಾಟಕದಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಕಾಂಗ್ರೇಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟ ಮಾಡಿದೆ. ಕರ್ನಾಟಕದಿಂದ ಅಖಿಲ ಭಾರತ ಕಾಂಗ್ರೇಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪವನ ಖೇರಾ ಹಾಗೂ

Live Cricket

error: Content is protected !!