ಧಾರವಾಡ ಜಿಲ್ಲೆ ಸೇರಿದಂತೆ ಹುಬ್ಬಳ್ಳಿ ಧಾರವಾಡ ಮಹಾನಗರ ವ್ಯಾಪ್ತಿಯಲ್ಲಿ ಈದ್ ಮಿಲಾದ್ ಹಬ್ಬವನ್ನು ಸೆ.28 ಕ್ಕೆ ಆಚರಿಸುತ್ತಿರುವದರಿಂದ ಮಹಾನಗರ ಪಾಲಿಕೆ ವ್ಯಾಪ್ತಿ ಸೇರಿ ಧಾರವಾಡ ಜಿಲ್ಲೆಯಾದ್ಯಂತ ಸೆ.28 ರಂದು ಸರ್ಕಾರಿ ರಜೆ ಇರುತ್ತದೆ ಎಂದು ಘೋಷಿಸಿ, ಜಿಲ್ಲಾದಂಡಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಮರು ಆದೇಶ ಹೊರಡಿಸಿದ್ದಾರೆ.
ಈ ಮೊದಲು ಸೆ.29 ಕ್ಕೆ ಘೋಷಿಸಿದ್ದ ರಜೆಯ ಆದೇಶವನ್ನು ಈ ತಕ್ಷಣದಿಂದ ಹಿಂಪಡೆದಿದ್ದು, ಅವಳಿ ನಗರ ಸೇರಿ ಧಾರವಾಡ ಜಿಲ್ಲೆಯಾದ್ಯಂತ ಈ ಮೊದಲಿನಂತೆ ಸೆ.28 ಕ್ಕೆ ಸರಕಾರಿ ರಜೆ ಇರುತ್ತದೆ ಎಂದು ಜಿಲ್ಲಾಧಿಕಾರಿಗಳು ಹೊರಡಿಸಿರುವ ಮರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Author: Karnataka Files
Post Views: 2





