ಹುಕ್ಕೇರಿಯ ಎಲಿಮುನ್ನೋಳಿ ಗ್ರಾಮದಲ್ಲಿ ದೊಡ್ಡ ಅನಾಹುತವೊಂದು ತಪ್ಪಿದೆ. ಮಕ್ಕಳಿದ್ದ ಶಾಲಾ ವಾಹನ ಜಲಾವೃತಗೊಂಡ ರಸ್ತೆಯಲ್ಲಿ ಚಲಾಯಿಸಿದ್ದಾನೆ. ಮಕ್ಕಳನ್ನು ತುಂಬಿದ್ದ ಬಸ್ ಜಲಾವೃತಗೊಂಡ ರಸ್ತೆ ಬಳಿ ಬಂದಾಗ ಅಕ್ಕಪಕ್ಕದ ಜನ, ಬಸ್ ನಿಲ್ಲಿಸುವಂತೆ ಕೂಗಿದ್ದಾರೆ. ಆದರೆ, ಅವರ ಮನವಿಯನ್ನು ನಿರ್ಲಕ್ಷಿಸಿ, ಬಸ್ ಚಾಲಕ ಜಲಾವೃತಗೊಂಡ ರಸ್ತೆಯಲ್ಲಿ ತನ್ನ ಪ್ರಯಾಣವನ್ನು ಮುಂದುವರೆಸಿದ್ದಾನೆ. ಇದರಿಂದ ಬಸ್ ನೀರಿಗೆ ನುಗ್ಗಿ ಮಕ್ಕಳ ಪ್ರಾಣಕ್ಕೆ ಅಪಾಯ ತಂದೊಡ್ಡಿದೆ. ಅದೃಷ್ಟವಶಾತ್, ಸಮಯೋಚಿತ ಮಧ್ಯಪ್ರವೇಶದಿಂದ, ಎಲ್ಲಾ ಮಕ್ಕಳು ಮತ್ತು ಚಾಲಕನನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ. ಹುಕ್ಕೇರಿಯ ಎಲಿಮುನ್ನೋಳಿ ಗ್ರಾಮದಲ್ಲಿ ಸಂಭಾವ್ಯ ಅನಾಹುತವನ್ನು ತಪ್ಪಿಸಲಾಗಿದ್ದು, ನಿರ್ಲಕ್ಷ ವಹಿಸಿದ ಚಾಲಕನನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
Author: Karnataka Files
Post Views: 2





