Download Our App

Follow us

Home » ಭಾರತ » ಮದ್ಯ ನಿಷೇಧ ಮಾಡಿ ಎಂದ ಕಾಂಗ್ರೇಸ್ ವಕ್ತಾರ, ಕಷ್ಟ ಅಂದ್ರು ಸಚಿವರು.

ಮದ್ಯ ನಿಷೇಧ ಮಾಡಿ ಎಂದ ಕಾಂಗ್ರೇಸ್ ವಕ್ತಾರ, ಕಷ್ಟ ಅಂದ್ರು ಸಚಿವರು.

ಧಾರವಾಡದಲ್ಲಿಂದು ಮಹಾತ್ಮಾ ಗಾಂಧಿಜೀಯವರ 154 ನೇ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಬೆಳಿಗ್ಗೆ ನಗರದ ಪ್ರಮುಖ ಬೀದಿಗಳಲ್ಲಿ ಪ್ರಭಾತಪೇರಿ ನಡೆಸಲಾಯಿತು. ಗಾಂಧಿಯವರ ಅಚ್ಚುಮೆಚ್ಚಿನ ಖಾದಿ ಯಾತ್ರೆ ನಡೆಯಿತು. ಇದೇ ವೇಳೆ ಪಾಲಿಕೆ ಆವರಣದಲ್ಲಿರುವ ಲಾಲ್ ಬಹಾದ್ದೂರ ಶಾಸ್ತ್ರಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ನಂತರ ಜಿಲ್ಲಾಧಿಕಾರಿ ಕಚೇರಿ ಎದುರು ಇರುವ ಮಹಾತ್ಮ ಗಾಂಧಿಜೀಯವರ ಪ್ರತಿಮೆಗೆ ಮಾಲೆ ಹಾಕಿ ಗೌರವ ಸಲ್ಲಿಸಲಾಯಿತು.

ನಂತರ ಮಾತನಾಡಿದ ಕೆ ಪಿ ಸಿ ಸಿ ವಕ್ತಾರ ಪಿ ಎಚ್ ನೀರಲಕೇರಿ, ರಾಜ್ಯದಲ್ಲಿ ಪಾನ ನಿಷೇಧ ಮಾಡುವಂತೆ ಒತ್ತಾಯಿಸಿದರು. ಹಳ್ಳಿಗಾಡಿನಲ್ಲಿ ಕುಡಿತದ ಚಟಕ್ಕೆ ಸಣ್ಣ ಸಣ್ಣ ಮನೆತನಗಳು ಹಾಳಾಗುತ್ತಿದ್ದು, ರಾಜ್ಯದಲ್ಲಿ ಮದ್ಯ ನಿಷೇಧ ಮಾಡುವಂತೆ ತಮ್ಮದೇ ಸರ್ಕಾರಕ್ಕೆ ಒತ್ತಾಯಿಸಿದರು. ಇದಕ್ಕೂ ಮುನ್ನ ಅದೇ ಸ್ಥಳದಲ್ಲಿ ಮಾತನಾಡಿದ್ದ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಮದ್ಯ ನಿಷೇಧ ಕಷ್ಟ, ಆದರು ಅಬಕಾರಿ ಸಚಿವರ ಜೊತೆ ಮಾತನಾಡುವದಾಗಿ ಹೇಳಿದ್ದರು.

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ : ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ಹರಿಸಿದ ಶಾಸಕ ವಿನಯ ಕುಲಕರ್ಣಿ

ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಅವರು ಜಾಮೀನಿನ ಮೇಲೆ ಬಂದ ನಂತರ ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ಹರಿಸಿದ್ದಾರೆ. ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ

Live Cricket

error: Content is protected !!