ಧಾರವಾಡದ ಕರ್ನಾಟಕ ಕೃಷಿ ವಿಶ್ವವಿದ್ಯಾಲಯದಿಂದ ತರಬೇತಿಗಾಗಿ ಇಸ್ರೇಲ್ ಗೆ ಹೋಗಿದ್ದ ಹವಾಮಾನಶಾಸ್ತ್ರಜ್ಞ ಸುಮೇಶ್ ಝೆರೋಸೇಲಮ್ ನಲ್ಲಿ ಸುರಕ್ಷಿತವಾಗಿದ್ದಾರೆ. ಝೆರೋಸೇಲಮ್ ನ ಹೀಬ್ರೋ ವಿಶ್ವವಿಧ್ಯಾಲಯದಲ್ಲಿ ಹವಾಮಾನಕ್ಕೆ ಸಂಬಂದಿಸಿದಂತೆ ತರಬೇತಿ ಹಾಗೂ ಉಪನ್ಯಾಸ ನೀಡಲು ಸುಮೇಶ್ ಹೋಗಿದ್ದರು.

ಸುಮೇಶ್ ಅಲ್ಲಿಂದಲೇ ಯುದ್ಧ ಪೀಡಿತ ಇಸ್ರೇಲ್ ಪರಿಸ್ಥಿತಿ ಬಗ್ಗೆ ವಿಡಿಯೋ ಮೂಲಕ ಅಲ್ಲಿನ ಪರಿಸ್ಥಿತಿ ಬಗ್ಗೆ ವಿವರಿಸಿದ್ದು, ಇನ್ನೆರಡು ದಿನಗಳಲ್ಲಿ ಭಾರತಕ್ಕೆ ಮರಳಲಿದ್ದಾರೆ. ಅವರು ವಿವರಿಸಿದ ವಿಡಿಯೋ ಇಲ್ಲಿದೆ ನೋಡಿ.
Author: Karnataka Files
Post Views: 12





