ನವರಾತ್ರಿ ಉತ್ಸವದ ಪ್ರಯುಕ್ತ ಶ್ರೀರಾಮ ಸೇನೆ ಕಾರ್ಯಕರ್ತನೊಬ್ಬ ಖಡ್ಗಕ್ಕೆ ತನ್ನ ಹೆಬ್ಬೆರಳನ್ನು ಕೊಯ್ದುಕೊಂಡು ದುರ್ಗಾದೇವಿಗೆ ತಿಲಕವಿಟ್ಟು ಭಕ್ತಿ ಸಮರ್ಪಿಸಿದ್ದಾನೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಸ್ತವಾಡ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದಲ್ಲಿ ದುರ್ಗಾ ದೌಡ ನಡೆಸಿದ ಶ್ರೀರಾಮ ಸೇನೆ ಕಾರ್ಯಕರ್ತರು, ಜಯಘೋಷದೊಂದಿಗೆ ಮೆರವಣಿಗೆ ನಡೆಸಿದರು. ಕಾಡಸಿದ್ದೇಶ್ವರ ದೇವಸ್ಥಾನದ ಬಳಿ ಪ್ರತಿಷ್ಟಾಪಿಸಿರುವ ದುರ್ಗಾದೇವಿ ಮೂರ್ತಿಗೆ ರಕ್ತದ ತಿಲಕವಿಟ್ಟು, ಯುವಕನೊಬ್ಬ ಭಕ್ತಿ ಸಮರ್ಪಿಸಿದ್ದು ಗಮನ ಸೆಳೆಯಿತು.
Author: Karnataka Files
Post Views: 2





