ಕಿತ್ತೂರು ತಾಲೂಕಿನ ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ, ಕರ್ನಾಟಕ ಸರ್ಕಾರ ಕೊಡುವ 2023 ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಸಮಾಜ ಸೇವೆ ಕ್ಷೇತ್ರದಲ್ಲಿ ನಿಜಗುಣಾನಂದ ಸ್ವಾಮೀಜಿಯವರಿಗೆ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ. ಬೈಲೂರನ್ನು ವ್ಯಸನಮುಕ್ತ ಗ್ರಾಮವನ್ನಾಗಿ ಮಾಡಿರುವ ಶ್ರೀಗಳು, ಕಂದಾಚಾರ, ಮೂಡನಂಬಿಕೆ ವಿರುದ್ಧ ಪ್ರಖರ ವಿಚಾರಗಳನ್ನು ಮಂಡಿಸಿ, ಖ್ಯಾತಿಗಳಿಸಿದ್ದಾರೆ. ಕರ್ನಾಟಕ ಸರ್ಕಾರ ನಿಜಗುಣಾನಂದ ಸ್ವಾಮೀಜಿ ಸೇರಿದಂತೆ 68 ಸಾಧಕರಿಗೆ ಮತ್ತು 10 ಸಂಘ ಸಂಸ್ಥೆಗಳಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಿದೆ.
Author: Karnataka Files
Post Views: 2





