ಪಂಚರಾಜ್ಯಗಳ ಚುನಾವಣೆ ಬೆನ್ನಲ್ಲೇ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ರಿಗೆ ಬಂಧನದ ಭೀತಿ ಎದುರಾಗಿದೆ. ಮನೀಶ್ ಸಿಸೋಡಿಯಾ ಈಗಾಗಲೇ ಜೈಲಿನಲ್ಲಿದ್ದು, ಆಪ್ ಪಕ್ಷಕ್ಕೆ ಮತ್ತೊಂದು ಕಂಟಕ ಎದುರಾಗಿದೆ. ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ಇ ಡಿ ಕೇಜ್ರಿವಾಲ್ ಗೆ ಸಮನ್ಸ್ ಜಾರಿ ಮಾಡಿದೆ. ಇ ಡಿ ಸಮನ್ಸ್ ರಾಜಕೀಯ ಪ್ರೇರಿತವಾಗಿದ್ದು ಕೊಡಲೇ ಸಮನ್ಸ್ ವಾಪಸ ಪಡೆಯಬೇಕೆಂದು ಕೇಜ್ರಿವಾಲ್ ಆಗ್ರಹಿಸಿದ್ದಾರೆ. ವಿರೋದ ಪಕ್ಷದವರನ್ನು ಹಣೆಯುವ ಷಡ್ಯಂತ್ರ ನಡೆದಿದೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.
Author: Karnataka Files
Post Views: 2





