ಹಿಂದುಳಿದ ವರ್ಗಗಳ ಆಯೋಗ ನಡೆಸಿದ ಜಾತಿ ಗಣತಿ ಅವೈಜ್ಞಾನಿಕವಾಗಿದ್ದು, ವೈಜ್ಞಾನಿಕವಾಗಿ ಸಮೀಕ್ಷೆ ನಡೆಯಲಿ ಎಂದು ವೀರಶೈವ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷ, ಶಾಸಕ ಶಾಮನೂರು ಶಿವಶಂಕರಪ್ಪ ಆಗ್ರಹಿಸಿದ್ದಾರೆ.
ಜಾತಿ ಗಣತಿ ಲೋಪದಿಂದ ಕೊಡಿದೆ, ಹಾಗಾಗಿ ಅದನ್ನ ವಿರೋದ ಮಾಡುತ್ತಿದ್ದೇವೆ. ಈಗಾಗಲೇ ವರದಿಯಲ್ಲಿರುವ ಮಾಹಿತಿ ಸೋರಿಕೆಯಾಗಿದ್ದು, ವೀರಶೈವ ಲಿಂಗಾಯತ ಎಂದು ಬರೆದುಕೊಂಡಿಲ್ಲ ಎಂದು ಶಾಮನೂರು ಶಿವಶಂಕರಪ್ಪ ಆರೋಪಿಸಿದ್ದಾರೆ. ಒಕ್ಕಲಿಗರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಜಾತಿ ಗಣತಿ ವರದಿಗೆ ವಿರೋದ ವ್ಯಕ್ತಪಡಿಸಿದ್ದು, ನಾವು ಸಹ ಎಲ್ಲರ ಸಹಿ ಮಾಡಿಸಿ, ಮುಖ್ಯಮಂತ್ರಿಗಳನ್ನು ಭೇಟಿ ಮಾಡುತ್ತೇವೆ ಎಂದರು.
ಕೆಲವರು ಜಾತಿ ಗಣತಿ ವರದಿ ಪರವಾಗಿ ಮಾತನಾಡುತ್ತಿದ್ದು, ಮಂತ್ರಿಗಿರಿ ಸಿಗದಿದ್ದಕ್ಕೆ ಏನೇನು ಮಾತನಾಡುತ್ತಿದ್ದಾರೆ ಎಂದು ಬಸವರಾಜ ರಾಯರೆಡ್ಡಿ ಕಾಲೆಳೆದರು. ಪ್ರತ್ತೈಕ ಲಿಂಗಾಯತ ಧರ್ಮ ಎಂದು ಹೋದವರು ಸೋತರು, ಬರಿ ಲಿಂಗಾಯತ ಅಂತಾ ಹೋದವರು ಮಣ್ಣು ಕಚ್ಚಿದರು ಎಂದು ಶಾಮನೂರು ಹೇಳಿದರು.
ಜಾತಿ ಗಣತಿ ವಿಚಾರ ಲೋಕಸಭಾ ಚುನಾವಣೆಯಲ್ಲಿ ದೊಡ್ಡ ಪೆಟ್ಟು ನೀಡತ್ತೆ ಎಂದು ಶಾಮನೂರು ಶಿವಶಂಕರಪ್ಪ ಎಚ್ಚರಿಸಿದ್ದಾರೆ.





