Download Our App

Follow us

Home » ಭಾರತ » ಗುಜರಾತಿನಲ್ಲಿ ಸಿಡಿಲಿಗೆ 20 ಜನರ ಬಲಿ, 50 ಜಾನುವಾರು ಸಾವು.

ಗುಜರಾತಿನಲ್ಲಿ ಸಿಡಿಲಿಗೆ 20 ಜನರ ಬಲಿ, 50 ಜಾನುವಾರು ಸಾವು.

ಅಕಾಲಿಕ ಮತ್ತು ಆಲಿಕಲ್ಲು ಮಳೆಯು ಗುಜರಾತ್‌ನ್ನು ಹಿಂಡಿ ಹಿಪ್ಪೆ ಮಾಡಿದೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಗುಡುಗು ಸಿಡಿಲಿನಿಂದ ಮಳೆಗೆ ಇಡೀ ಗುಜರಾತ ತತ್ತರಿಸಿ ಹೋಗಿದೆ. 220 ತಾಲೂಕುಗಳಲ್ಲಿ ಬೆಳೆದು ನಿಂತ ಬೆಳೆ ಅಕಾಲಿಕ ಮಳೆಯ ಹೊಡೆತಕ್ಕೆ ಕೊಚ್ಚಿ ಹೋಗಿದೆ. 

ಸ್ಟೇಟ್ ಎಮರ್ಜೆನ್ಸಿ ಆಪರೇಷನ್ ಸೆಂಟರ್ (ಎಸ್‌ಇಒಸಿ) ಪ್ರಕಾರ, ದಾಹೋಡ್ ಜಿಲ್ಲೆಯಲ್ಲಿ ಮೂರು, ಭರೂಚ್‌ನಲ್ಲಿ ಎರಡು ಮತ್ತು ಅಮ್ರೇಲಿ, ಸುರೇಂದ್ರನಗರ, ಮೆಹ್ಸಾನಾ, ಬೊಟಾಡ್, ಪಂಚಮಹಲ್ಸ್, ಖೇಡಾ, ಸಬರ್ಕಾಂತ, ಸೂರತ್ ಮತ್ತು ಅಹಮದಾಬಾದ್‌ನಲ್ಲಿ ಸೋಮವಾರ ಸಂಜೆಯ ವೇಳೆಗೆ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. 

251 ತಾಲೂಕುಗಳ ಪೈಕಿ 220 ತಾಲೂಕುಗಳಲ್ಲಿ ಸಾಕಷ್ಟು ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ ಮತ್ತು ಬೆಳೆಗಳಿಗೆ ಹಾನಿಯಾಗಿದೆ ಎಂದು ರಾಜ್ಯ ಸರ್ಕಾರ ಹೇಳಿದೆ. 

ಹಲವು ಜಿಲ್ಲೆಗಳಲ್ಲಿ ಆಲಿಕಲ್ಲು ಸಹಿತ ಮಳೆಯಿಂದ ಬೆಳೆದ ಬೆಳೆಗಳು ನಾಶವಾಗಿವೆ. ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಇನ್ನು ಹೆಚ್ಚಿನ ಮಳೆ ಮತ್ತು ವಿಲಕ್ಷಣ ಹವಾಮಾನವನ್ನು ವೀಕ್ಷಿಸುವ ಸಾಧ್ಯತೆಯಿದೆ ಎಂದು ಹೇಳಿದೆ.

ಅಕಾಲಿಕ ಮಳೆಗೆ ಗುಜರಾತ ಸಂಪೂರ್ಣವಾಗಿ ತತ್ತರಿಸಿದ್ದು, ಸಿಡಿಲಿಗೆ ಈಗಾಗಲೇ 20 ಜನ ಬಲಿಯಾಗಿದ್ದರೆ, 50 ಕ್ಕೂ ಹೆಚ್ಚು ಜಾನುವಾರುಗಳು ಸಾವನ್ನಪ್ಪಿವೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ರಾಜ್ಯಸಭೆಗೆ ಕರ್ನಾಟಕದಿಂದ ಕಾಂಗ್ರೇಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ : ಮನ್ಸೂರ್ ಅಲಿ ಖಾನ್ ಗೆ ಟಿಕೇಟ್ ಘೋಷಣೆ

ಕರ್ನಾಟಕದಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಕಾಂಗ್ರೇಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟ ಮಾಡಿದೆ. ಕರ್ನಾಟಕದಿಂದ ಅಖಿಲ ಭಾರತ ಕಾಂಗ್ರೇಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪವನ ಖೇರಾ ಹಾಗೂ

Live Cricket

error: Content is protected !!