ಯಾಲಕ್ಕಿ ನಾಡು ಹಾವೇರಿ ಗದಗ ಲೋಕಸಭಾ ಕ್ಷೇತ್ರ ಈ ಸಲ ಗಮನ ಸೆಳೆದಿದೆ. ಮಾಜಿ ಉಪ ಮುಖ್ಯಮಂತ್ರಿ ಮತ್ತು ಬಿಜೆಪಿ ಅಗ್ರಗಣ್ಯ ನಾಯಕ ಕೆ ಎಸ್ ಈಶ್ವರಪ್ಪ ಈ ಕ್ಷೇತ್ರದಲ್ಲಿ ತಮ್ಮ ಮಗ ಕಾಂತೇಶಗೆ ಬಿಜೆಪಿ ಟಿಕೇಟ ಕೊಡಿಸಲು ಪ್ರಯತ್ನ ನಡೆಸಿದ್ದಾರೆ. ಮತ್ತೊಂದೆಡೆ ಆರ್ ಎಸ್ ಎಸ್ ನಾಯಕರ ಅಣತಿಯಂತೆ ಯುವ ಹೋರಾಟಗಾರ ಶರಣಬಸವ ಅಂಗಡಿ ಬಿಜೆಪಿ ಟಿಕೇಟಗಾಗಿ ಇನ್ನಿಲ್ಲದ ಕಸರತ್ತು ಆರಂಭಿಸಿದ್ದಾರೆ.
ಮೊನ್ನೆಯಷ್ಟೇ ಹುಬ್ಬಳ್ಳಿಗೆ ಬಂದಿದ್ದ ಕೆ ಎಸ್ ಈಶ್ವರಪ್ಪ, ಕೇಂದ್ರ ಸಚಿವ ಪ್ರಲ್ಲಾದ ಜೋಶಿಯವರನ್ನು ಭೇಟಿ ಮಾಡಿ, ಮಗ ಕಾಂತೇಶನಿಗೆ ಹಾವೇರಿ ಲೋಕಸಭಾ ಟಿಕೇಟ್ ಕೊಡಿಸುವದರ ಬಗ್ಗೆ ಒತ್ತಡ ಹೇರಿದ್ದಾರೆ ಎನ್ನಲಾಗಿದೆ. ಅಲ್ಲದೆ ಕಾಂತೇಶ್ ಸಹ ಕಳೆದ ಒಂದು ವರ್ಷದಿಂದ ಹಾವೇರಿಯಲ್ಲಿ ಮನೆ ಮಾಡಿಕೊಂದು ಕ್ಷೇತ್ರವ್ಯಾಪಿ ಸುತ್ತುತ್ತಿದ್ದಾರೆ.
ಇದಕ್ಕೆ ಪ್ರತಿಯಾಗಿ ಆರ್ ಎಸ್ ಎಸ್ ನ ಮುಖಂಡರ ಹಾಗೂ ಬಿಜೆಪಿ ನಾಯಕರ ಜೊತೆ ಉತ್ತಮ ಒಡನಾಟ ಹೊಂದಿರುವ ಶರಣು ಅಂಗಡಿ, ಈಗಾಗಲೇ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಓಡಾಡಿಕೊಂಡಿದ್ದು, ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಅಲ್ಲದೆ ಹಾವೇರಿ ಜಿಲ್ಲೆಯವರೆ ಆದ ಶರಣು ಅಂಗಡಿ, ಸ್ಥಳೀಕರಿಗೆ ಲೋಕಸಭಾ ಟಿಕೇಟ್ ಕೊಡಬೇಕು ಎಂದು ಒತ್ತಡ ಹೇರಿದ್ದಾರೆ.

ಕೆ ಎಸ್ ಈಶ್ವರಪ್ಪನವರ ಪುತ್ರ ಕಾಂತೇಶ್ ಹಾಗೂ ಶರಣಬಸವ ಅಂಗಡಿ ನಡುವೆ ಟಿಕೇಟಗಾಗಿ ಬಿಗ್ ಫೈಟ್ ನಡೆದಿದ್ದು, ಹಾವೇರಿ ಲೋಕಸಭಾ ಕ್ಷೇತ್ರ ಕುತೂಹಲ ಮೂಡಿಸಿದೆ.





