ಬಿಹಾರದ ಪಾಲಿಗಂಜ್‌ನಲ್ಲಿ ರಾಹುಲ್ ಗಾಂಧಿಯವರ ರ್ಯಾಲಿಗಾಗಿ ಸಿದ್ಧಪಡಿಸಿದ ವೇದಿಕೆಯ ಒಂದು ಭಾಗವು ಕಾಂಗ್ರೆಸ್ ಸಂಸದರು ಇತರ ಪಕ್ಷದ ನಾಯಕರೊಂದಿಗೆ ಆಗಮಿಸುತ್ತಿದ್ದಂತೆ ಕುಸಿದಿದೆ.
ಅದೃಷ್ಟಾವಶಾತ ರಾಹುಲ್ ಗಾಂಧಿ ಅಪಾಯದಿಂದ ಪಾರಾಗಿದ್ದಾರೆ. ವೇದಿಕೆ ಮೇಲೆ ಹೆಚ್ಚು ಜನ ಬಂದಿದ್ದರಿಂದ ವೇದಿಕೆ ಕುಸಿದಿದೆ ಎಂದು ಹೇಳಲಾಗಿದೆ. ವೇದಿಕೆ ಕುಸಿಯುತ್ತಿದ್ದಂತೆ ರಾಹುಲ್ ಗಾಂಧಿಯವರ ರಕ್ಷಣೆಗೆ ಬಂದ ಅವರ ಅಂಗರಕ್ಷಕರು, ಅವರನ್ನು ಅಲ್ಲಿಂದ ಸುರಕ್ಷಿತವಾಗಿ ವೇದಿಕೆಯಿಂದ ಇಳಿಸಿದ್ದಾರೆ.
Author: Karnataka Files
Post Views: 2





